ಜನಮನದ ನಾಯಕ ಟಿ. ಹನೀಫ್ ಕಾಂಜಿಲಕೊಡಿ ಅಡ್ಡೂರು ಇನ್ನಿಲ್ಲ

0
20

​ಗುರುಪುರ ಪರಿಸರದ ಪ್ರಭಾವಿ ಮುಖಂಡ, ನಿಗರ್ವಿ ಹಾಗೂ ಸದಾ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಟಿ. ಹನೀಫ್ ಕಾಂಜಿಲಕೊಡಿ ಅಡ್ಡೂರು ಅವರು ಹೃದಯಾಘಾತದಿಂದ ನಿಧನರಾಗಿರುವುದು ಇಡೀ ಅಡ್ಡೂರು ಮತ್ತು ಗುರುಪುರ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಗುರುಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ ಅವರು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಿದ್ದರು. ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕಾಂಗ್ರೆಸ್ ಪಕ್ಷದ ಸಕ್ರಿಯ ಮತ್ತು ಪ್ರಮುಖ ಕಾರ್ಯಕರ್ತರಾಗಿದ್ದ ಅವರು, ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಉತ್ತಮ ಕೊಂಡಿಯಾಗಿದ್ದರು.

ಧರ್ಮ, ಜಾತಿ ಭೇದವಿಲ್ಲದೆ ಕಷ್ಟದಲ್ಲಿದ್ದವರಿಗೆ ನೆರವಾಗುವ ಗುಣ ಹೊಂದಿದ್ದ ಹನೀಫ್ ಅವರು, ಅಡ್ಡೂರು ಪರಿಸರದಲ್ಲಿ ಸಮಾಜ ಸೇವಕರಾಗಿ ಸದಾ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ.

ಟಿ. ಹನೀಫ್ ಅವರ ನಿಧನವು ಕೇವಲ ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲದೆ, ಇಡೀ ಅಡ್ಡೂರು ಪರಿಸರಕ್ಕೆ ದೊಡ್ಡ ನಷ್ಟವಾಗಿದೆ. ಸದಾ ಹಸನ್ಮುಖಿಯಾಗಿ, ಎಲ್ಲರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದ್ದೇವೆ.

LEAVE A REPLY

Please enter your comment!
Please enter your name here