ಕೊಳಲಗಿರಿ–ಮಣಿಪಾಲ ರಸ್ತೆ ಅಭಿವೃದ್ಧಿಗೆ ಚಾಲನೆ : ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಹೋರಾಟಕ್ಕೆ ಕೊನೆಗೂ ಫಲ

0
38

ಉಡುಪಿ : ಹಲವು ವರ್ಷಗಳಿಂದ ಹದಗೆಟ್ಟು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಸಂಕಷ್ಟ ಉಂಟುಮಾಡುತ್ತಿದ್ದ ಕೊಳಲಗಿರಿ–ಮಣಿಪಾಲ ಸಂಪರ್ಕ ರಸ್ತೆಯಲ್ಲಿ ಇದೀಗ ತಾತ್ಕಾಲಿಕ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಕೀಳಂಜೆ ಅವರ ನಿರಂತರ ಪ್ರಯತ್ನ, ಜನಪರ ಹೋರಾಟ ಹಾಗೂ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದ ಪರಿಣಾಮ ರಸ್ತೆ ದುರಸ್ತಿಗೆ ಚಾಲನೆ ದೊರೆತಿದೆ.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಸೂಚನೆಯ ಮೇರೆಗೆ ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆ ರಸ್ತೆಯ ಎರಡೂ ಬದಿಗಳ ಗುಂಡಿಗಳನ್ನು ಮುಚ್ಚಿ, ಜಲ್ಲಿ ಕಲ್ಲು ಹಾಕಿ, ಸುಮಾರು ಮೂರು ಅಡಿ ಅಗಲೀಕರಣದೊಂದಿಗೆ ಸಮತಟ್ಟು ಮಾಡುವ ತಾತ್ಕಾಲಿಕ ಕಾಮಗಾರಿ ಕೈಗೊಂಡಿದೆ.

ಕೊಳಲಗಿರಿ–ಮಣಿಪಾಲ ಮಾರ್ಗವು ಶೀಮ್ರ ಸೇತುವೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ಅಪಾಯದ ನಡುವೆ ಸಂಚರಿಸಬೇಕಾಗುತ್ತಿತ್ತು. ಗುಂಡಿಗಳಿಂದಾಗಿ ದಿನನಿತ್ಯ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ನಿರಂತರವಾಗಿ ಪತ್ರಿಕೆಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದರ ಫಲವಾಗಿ ಈಗ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.

ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ. ಗಣೇಶ್ ನಾಯ್ಕ್, ಸತೀಶ್ ನಾಯ್ಕ್, ಸಂತೋಷ್ ನಾಯ್ಕ್ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಶಾಶ್ವತ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಕೊಳಲಗಿರಿ ಮಣಿಪಾಲ ಪ್ರಮುಖ ಸಂಪರ್ಕಿಸುವ ರಸ್ತೆ ಈ ರಸ್ತೆಯ ಹೊಂಡ ಗುಂಡಿ ಸಮಸ್ಯೆ ಬಗ್ಗೆ ಸ್ಪಂದಿಸಿದ ಜನಪ್ರಿಯ ಶಾಸಕರಾದ ಯಶ್ ಪಾಲ್ ಸುವರ್ಣ ರವರಿಗೆ ಮತ್ತು ಸಾಮಾಜಿಕ ಕಾರ್ಯಕರ್ತರದ ಸತೀಶ್ ಪೂಜಾರಿ ಕೀಳಂಜಿ ಅವರಿಗೆ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಎಲ್ಲರಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸುವವರು.

ಇಲ್ಲಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನಸ್ವರರು ಹಾಗೂ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹಾಗೂ ಕೆಎಂಸಿ ಹೋಗುವ ಉದ್ಯೋಗಿಗಳು ಇವರೆಲ್ಲರ ಪರವಾಗಿ ಇವರಿಗೆ ಅಭಿನಂದನೆ ಸಲ್ಲಿಸುವವರು ಗಣೇಶ ನಾಯ್ಕ್ ಪರಾರಿ ಸತೀಶ್ ನಾಯ್ಕ್ ಸಂತೋಷ್ ನಾಯ್ಕ್., ವಿನ್ಸೆಂಟ್ ಡಿಸೋಜ ಕೊಳಲಗಿರಿ ಮತ್ತು ಕೊಳಲಗಿರಿ ಪರಾರಿಯ ನಿವಾಸಿಗಳು.

LEAVE A REPLY

Please enter your comment!
Please enter your name here