40 ವರ್ಷಗಳ ಅವಿರತ ಜನಸೇವೆ – ಆದರ್ಶ ವೈದ್ಯ ಡಾ. ಕೃಷ್ಣರಾಜ ಅವರಿಗೆ ಪ್ರತಿಷ್ಠಿತ ಗೌರವ

0
39

-ಮಂದಾರ ರಾಜೇಶ್ ಭಟ್

​ಶಿರ್ತಾಡಿ: ವೈದ್ಯಕೀಯ ಕ್ಷೇತ್ರವನ್ನು ಕೇವಲ ವೃತ್ತಿಯನ್ನಾಗಿಸದೆ, ಅದನ್ನೊಂದು ಪವಿತ್ರ ಸೇವೆಯನ್ನಾಗಿ ಸ್ವೀಕರಿಸಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಜನಸೇವೆ ಮಾಡುತ್ತಾ ಬಂದಿರುವ ಡಾಕ್ಟರ್ ಕೃಷ್ಣರಾಜ ಅವರಿಗೆ ಪ್ರತಿಷ್ಠಿತ ಕೆ.ಎಂ.ಸಿ ಆಸ್ಪತ್ರೆಯ (KMC Hospital) ವತಿಯಿಂದ ವಿಶೇಷ ಗೌರವ ಹಾಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

​ಸರಳ ಸಜ್ಜನಿಕೆಯ ದೇವತಾ ಮನುಷ್ಯ

​ಮೂಲತಃ ಕಾಸರಗೋಡು ಜಿಲ್ಲೆಯ ಕಾನತ್ತೂರು ಗ್ರಾಮದವರಾದ ಡಾ. ಕೃಷ್ಣರಾಜ ಅವರು ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಲ್ಲಿ ತಮ್ಮ ‘ಸೇವಾ ಕ್ಷೇತ್ರ (ಕ್ಲಿನಿಕ್’) ಮೂಲಕ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.

ಯಾರೊಂದಿಗೂ ವೈಮನಸ್ಸು ಇಲ್ಲದೆ, ಎಲ್ಲರೊಂದಿಗೂ ಅತ್ಯಂತ ಪ್ರೀತಿ ಮತ್ತು ಸರಳತೆಯಿಂದ ಬೆರೆಯುವ ಸ್ವಭಾವ ಇವರದ್ದಾಗಿದೆ.

ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಇವರು ಈ ಭಾಗದ ಜನರ ಪಾಲಿಗೆ “ದೇವತಾ ಮನುಷ್ಯ” ಎಂದೇ ಪ್ರಸಿದ್ಧರಾಗಿದ್ದಾರೆ.

​ಅರ್ಹ ವೈದ್ಯರಿಗೆ ಒಲಿದ ಯೋಗ್ಯ ಸ್ಥಾನ

​ಡಾ. ಕೃಷ್ಣರಾಜ ಅವರ 40 ವರ್ಷಗಳ ಸುದೀರ್ಘ ಹಾಗೂ ಅದ್ಭುತ ವೈದ್ಯಕೀಯ ಸೇವೆಯ ಪಯಣವನ್ನು ಗುರುತಿಸಿ ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ಈ ಗೌರವವನ್ನು ಅರ್ಪಿಸಿದ್ದಾರೆ.

ಅಪಾರ ಜ್ಞಾನ, ಮಾನವೀಯತೆ ಹಾಗೂ ರೋಗಿಗಳ ಮೇಲಿನ ಕಾಳಜಿಯ ಮೂಲಕ ನೂರಾರು ಕುಟುಂಬಗಳಿಗೆ ಹೊಸ ಜೀವನದ ಆಶಾಕಿರಣವಾಗಿರುವ ಇವರಿಗೆ ಈ ಪ್ರಶಸ್ತಿ ಒಲಿದು ಬಂದಿರುವುದು ಅತ್ಯಂತ ಯೋಗ್ಯ ವೈದ್ಯರಿಗೆ ಸಿಕ್ಕಿದ ಸೂಕ್ತ ಸ್ಥಾನವಾಗಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.

​ ವೈದ್ಯರ ದಿನಾಚರಣೆಯ (Doctors Day Celebration) ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ವೈದ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಡಾ. ಕೃಷ್ಣರಾಜ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

​”ಸೇವೆ ನಿಮ್ಮ ಧ್ವೇಯ… ಕರುಣೆ ನಿಮ್ಮ ಗುರುತು… ನಿಮ್ಮ ಪಯಣ ನಮ್ಮ ಪ್ರೇರಣೆ…” ಎಂಬ ಮಾತುಗಳಿಗೆ ಅನ್ವರ್ಥ ನಾಮರಾಗಿರುವ ಡಾ. ಕೃಷ್ಣರಾಜ ಅವರಿಗೆ ಭಗವಂತನು ಉತ್ತಮ ಆರೋಗ್ಯ, ಸಂತೋಷ ಹಾಗೂ ದೀರ್ಘಾಯುಷ್ಯವನ್ನು ಕರುಣಿಸಲಿ ಮತ್ತು ಅವರ ಮುಂದಿನ ಸೇವಾ ದಿನಗಳು ಸುಖಕರವಾಗಿರಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಗಿದೆ.

LEAVE A REPLY

Please enter your comment!
Please enter your name here