ಉಡುಪಿ: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಡೂರು ಮಂದಾರ್ತಿ ವತಿಯಿಂದ ಆಯೋಜಿಸಲಾಗಿರುವ ‘ಯಕ್ಷ ತಿರುಗಾಟ–2026’ ಕಾರ್ಯಕ್ರಮವು ಜುಲೈ 12ರಂದು ಸಂಜೆ 5 ಗಂಟೆಗೆ ಮುಂಬೈನ ರಿಜೆನ್ಸಿ ಪ್ಲಾಜಾ ಸಭಾಭವನದ (ಎ/ಸಿ) ಉಲ್ಹಾಸ ನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ, ಯಕ್ಷಕಲಾ ಸಂರಕ್ಷಕ ಹಾಗೂ ಯಕ್ಷಕಲಾ ರಸಿಕರಾದ ಆರ್ಡಿ ಉದಯ ಶೆಟ್ಟಿ, ಉಲ್ಹಾಸ ನಗರ, ಇವರ ನೇತೃತ್ವದಲ್ಲಿ ಹಾಗೂ ಸಂಯೋಜನೆಯೊಂದಿಗೆ ಮುಂಬೈ ಕರಾವಳಿ ಕನ್ನಡಿಗರ ಒಕ್ಕೂಟ ಉಲ್ಹಾಸ ನಗರ ಇವರ ಸಂಪೂರ್ಣ ಸಹಕಾರದೊಂದಿಗೆ ಬಡಗು ಯಕ್ಷಗಾನ ವೈಭವ ಶ್ವೇತ ಕುಮಾರ ಚರಿತ್ರೆ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ರಾಘವೇಂದ್ರ ಶೆಟ್ಟಿ ಬಡಬಾಳ ಹಾಗೂ ಸಂದೇಶ್ ಶೆಟ್ಟಿ ಕಕ್ಕುಂಜೆ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ಆರ್ಡಿ ಉದಯ ಶೆಟ್ಟಿ , ದಯಾನಂದ ಶೆಟ್ಟಿ ಉಲ್ಹಾಸ ನಗರ, ವಂಡ್ಸೆ ಸುಧೀರ ಶೆಟ್ಟಿ, ಅನಿಲ್ ಶೆಟ್ಟಿ ವಕ್ಕೇರಿ, ದೇವರಾಜ ಶೆಟ್ಟಿ ಬಾವಲಾಡಿ, ಜಗದೀಶ ಶೆಟ್ಟಿ ಬೇಳೆಂಜೆ ರಘು ಶೆಟ್ಟಿ ಕಾನ್ಕಿ ಉಪಸ್ಥಿತರಿರಲಿರುವರು.
ಕಾರ್ಯಕ್ರಮಕ್ಕೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

