ಮೂಡುಬಿದಿರೆ : ನಿಡ್ಡೋಡಿ ಚರ್ಚಿನಲ್ಲಿ ಪ್ರತಿಭಾ ಪುರಸ್ಕಾರ

0
43

ಮೂಡುಬಿದಿರೆ : ಸಂತ ತೆರೆಜಮ್ಮನವರ ದೇವಾಲಯ ನಿಡ್ಡೋಡಿಯಲ್ಲಿ ತಾರೀಕು ಜುಲೈ 5 ರವಿವಾರ ಬೆಳಗ್ಗಿನ ಬಲಿಪೂಜೆಯ ನಂತರ ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಾಯಿತು.

ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಪ್ರತಿಭಾ ಪುರಸ್ಕಾರ ನೆರವೇರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ ಕೊರೆಯಾ ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷರಾದ ಸರಿತ ತಾವ್ರೊ, ಕಾರ್ಯದರ್ಶಿ ಜೀವನ್ ಕ್ರಾಸ್ತಾ, ನಿಕಟ ಪೂರ್ವ ಅಧ್ಯಕ್ಷರಾದ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು.

ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ S.S.L.C, ದ್ವಿತೀಯ ಪಿಯುಸಿ, ಮತ್ತು ಇಂಜಿನಿಯರಿಂಗ್ ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ರಿಯೋಲಿನ್ ಸಲೋಮಿ ಡಿಸೋಜಾ, ರಿಶಾ ಡಿಸೋಜಾ, ಮರಿಶಾ ಸೆರಾವೊ,ಜೇನ್ ಕಾರ್ಡೊಜಾ,ಜೆನಿಟಾ ತಾವ್ರೊ,ಲಿಯೋನಾ ಡಿಸೋಜಾ, ಆಶೆಲ್ ಲವಿಟಾ ಡಿಸಿಲ್ವ,ಆನ್ಯಾ ಡಿಸೋಜಾ, ಜೋಶ್ವಾ ಡಿಸೋಜಾ ಇವರಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.

LEAVE A REPLY

Please enter your comment!
Please enter your name here