ಮೂಡುಬಿದಿರೆ : ಎಂಸಿಎಸ್ (MCS) ನಲ್ಲಿ ಕ್ಯಾಶಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಉಡುಪಿಯ ಎಸ್‌ವಿಟಿ (SVT) ಸಮೀಪದ ನಿವಾಸಿ ಬಾಲಕೃಷ್ಣ ಕಿಣಿ (64) ಅವರು ಜುಲೈ 6ರಂದು ನಿಧನ ಹೊಂದಿದರು.
ಸರಳ, ಸಜ್ಜನಿಕೆ ಹಾಗೂ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಅವರು ಸಹೋದ್ಯೋಗಿಗಳು ಹಾಗೂ ಪರಿಚಿತರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

