ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಭಾರತ್ ಮಹಾನ್ ಮೈ ಭಾರತ್ ಉಡುಪಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲದ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದ ಸಭಾಂಗಣದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇವರ ಜನ್ಮ ದಿನಾಚರಣೆ ಮತ್ತು ಜೀವನ ಚರಿತ್ರೆಯ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಉಪನ್ಯಾಸ ಮಾಡಿದ ಡಾ.ವಿನಾಯಕ ಭಟ್ಟ ಗಾಳಿಮನೆ ಮುಖ್ಯಸ್ಥರು ಸಂಸ್ಕೃತ ವಿಭಾಗ ಆಳ್ವಾಸ್ ಕಾಲೇಜ್ ಮೂಡುಬಿದಿರೆ ಇವರು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನ ಮೌಲ್ಯ ಮತ್ತು ಅವರು ಕಾಶ್ಮೀರವನ್ನು ಭಾರತದ ಇತರ ಭಾಗಗಳೊಂದಿಗೆ ಸಂಯೋಜಿಸುವ ಬಗ್ಗೆ ಅವರ ವಿಶೇಷ ಆಸಕ್ತಿ ಅವರ ರಾಷ್ಟ್ರೀಯವಾದಿ ನಿಲುವು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅವರ ದೇಶ ಪ್ರೇಮವನ್ನು ಇಂದಿನ ಯುವ ಜನಾಂಗ ಆದರ್ಶವಾಗಿ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್ ಇವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಡಲದ ಹಿರಿಯ ಸದಸ್ಯರಾದ ರಾಘು ಸುವರ್ಣ ಚಿನ್ಮಯಿ ದೀಪ ಪ್ರಜ್ವಲಿಸಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರ ಪುಷ್ಪಾರ್ಚನೆಗೈದರು. ಮಂಡಲದ ದಾನಿಗಳು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಆದ ಯುವರಾಜ್ ಜೈನ್ ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಆದ ಭಾಸ್ಕರ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಶೆಟ್ಟಿ ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ಅಮೀನ್, ಪ್ರಮೀಳಾ ಪೂಜಾರಿ ಮಂಡಲದ ಹಿತೈಷಿಗಳಾದ ಶ್ರೀ ಸುಧಾಕರ್ ಹೆಗ್ಡೆ ಶ್ರೀ ರವಿ ಪೂಜಾರಿ ಶ್ರೀಮತಿ ಶ್ಯಾಮಲಾ ಮಂಡಲದ ಮಾಜಿ ಅಧ್ಯಕ್ಷರುಗಳಾದ ಶ್ರೀ ರಾಘು ಪೂಜಾರಿ ಶ್ರೀ ಜಗದೀಶ್ ಕುಮಾರ್ ಶ್ರೀ ಶಂಕರ್ ಶೆಟ್ಟಿ ಕೊಲ್ದ್ರೋಟ್ಟು ಹಿರಿಯ ಸದಸ್ಯರುಗಳಾದ ಶ್ರೀ ಪ್ರಶಾಂತ್ ಶೆಟ್ಟಿ ಶ್ರೀ ರತ್ನಾಕರ್ ಕಾಮತ್ ಜೊತೆ ಕಾರ್ಯದರ್ಶಿಗಳಾದ ಶ್ರೀ ಪ್ರಮಿತ್ ಸುವರ್ಣ ಶ್ರೀ ಪ್ರಶಾಂತ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ ವಿದ್ಯಾನಂದ್ ಕೋಟ್ಯಾನ್ ಸಾಂಸ್ಕೃತಿಕ ಕಾರ್ಯದರ್ಶಿ ಮುರಳಿ ಸುವರ್ಣ ಸಮಿತಿ ಸದಸ್ಯರುಗಳಾದ ದಿನೇಶ್ ಮಡಿವಾಳ ಸೀತಾರಾಮ್ ಪ್ರವೀಣ್ ಶೆಟ್ಟಿ ಹರೀಶ್ ರಾವ್ ಜೀವನ್ ರಾವ್ ವಿಗ್ನೇಶ್ ರಾವ್ ಪ್ರಭಾಕರ್ ಶೆಟ್ಟಿ ಜಯಾನಂದ್ ಶೆಟ್ಟಿ ಪ್ರಸನ್ನ ಆಚಾರ್ಯ ಸೋಮಶೇಖರ್ ರಾವ್ ಸುರೇಂದ್ರ ಜಯ ಶೆಟ್ಟಿಗಾರ್ ವಿದ್ಯಾರ್ಥಿಗಳಾದ ಅಲೋಫ್, ಪ್ರಣೀತ್ ಪ್ರಥಮ್ ಅಖಿಲ್ ಉಪಸ್ಥಿತರಿದ್ದರು ಕಾರ್ಯದರ್ಶಿ ಶ್ರೀ ರಾಜೇಶ್ ಪೂಜಾರಿ ಎಲ್ಲರನ್ನು ಸ್ವಾಗತಿಸಿದರು ಮಂಡಲದ ಮಾಜಿ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಪ್ರಸ್ತಾವನೆಗೈದರು ಉಪಾಧ್ಯಕ್ಷರಾದ ಶ್ರೀ ಮೋಹನ್ ಶೆಟ್ಟಿ ಸಾಣೂರು ಧನ್ಯವಾದ ಸಲ್ಲಿಸಿದರು ಸಮಿತಿ ಸದಸ್ಯರಾದ ಸುದರ್ಶನ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು

