ಸ್ಪೀಡ್​ ರ್ಯಾಡರ್​ ಕ್ಯಾಮರಾ ಅಳವಡಿಕೆ ಪರಿಣಾಮ :ಸಂಚಾರ ನಿಯಮ ಉಲ್ಲಂನೆ ಪ್ರಕರಣ ಇಳಿಮುಖ

0
11

ಉಡುಪಿ: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಆರು ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಅತ್ಯಾಧುನಿಕ ‘ಸ್ವಯಂಚಾಲಿತ ನಂಬರ್​ ಪ್ಲೇಟ್​ ಗುರುತಿಸುವಿಕೆ ಸ್ಪೀಡ್​ ರ್ಯಾಡರ್​ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 2 ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇಳಿಕೆಯಾಗುತ್ತಿದೆ.
ಪಡುಬಿದ್ರಿ ಪೊಲೀಸ್​ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಪೊಲೀಸ್​ ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಪೊಲೀಸ್​ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಪೊಲೀಸ್​ ಠಾಣಾ ವ್ಯಾಪ್ತಿಯ ನಾಯ್ಕನಕಟ್ಟೆ ಹಾಗೂ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೂಪದಕಟ್ಟೆ ಸೇರಿದಂತೆ ಒಟ್ಟು ಆರು ಆಯಕಟ್ಟಿನ ಜಾಗಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ. ನಿಯಮ ಉಲ್ಲಂಘನೆಯ ಪ್ರಕಾರಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ ದಾಖಲಿಸುತ್ತದೆ. ಕ್ಯಾಮೆರಾದಲ್ಲಿ ದಾಖಲಾಗುವ ಉಲ್ಲಂಘನೆಗಳ ಆಧಾರದ ಮೇಲೆ ಸ್ವಯಂಚಾಲಿತವಾಗಿ ಇ&-ಚಲನ್​ ನೋಟಿಸ್​ಗಳನ್ನು ಸಿದ್ಧಪಡಿಸಿ, ವಾಹನದ ನೋಂದಾಯಿತ ಮಾಲೀಕರಿಗೆ ಕಳುಹಿಸುತ್ತದೆ. ಮೇ ತಿಂಗಳಲ್ಲಿ ಯೋಜನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,700 ಇ-&ಚಲನ್​ಗಳನ್ನು ಜಾರಿಗೊಳಿಸಲಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಎಲ್ಲಾ ಪ್ರಮುಖ ವಿಭಾಗಗಳ ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಶೇ. 40 ರಿಂದ ಶೇ. 70 ರಷ್ಟು ಗಣನೀಯ ಇಳಿಕೆ ಕಂಡುಬಂದಿದೆ.

ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳ ಅತಿ ವೇಗ ಬಗ್ಗೆ ಮೊದಲ ವಾರದಲ್ಲಿ 40,175 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ ಈ ಸಂಖ್ಯೆ 14,364ಕ್ಕೆ ಇಳಿಕೆಯಾಗಿದೆ. ಸೀಟ್​ ಬೆಲ್ಟ್​ ಧರಿಸದಿರುವ ಬಗ್ಗೆ ಆರಂಭದಲ್ಲಿ 15,575 ಪ್ರಕರಣಗಳು ಕಂಡುಬಂದಿದ್ದು, ಪ್ರಸ್ತುತ 6,561ಕ್ಕೆ ಇಳಿದಿದೆ. ಹೆಲ್ಮೆಟ್​ ರಹಿತ ಚಾಲನೆ ಬಗ್ಗೆ ಮೊದಲ ವಾರದಲ್ಲಿ 12,440 ಹೆಲ್ಮೆಟ್​ ರಹಿತ ಚಾಲನೆ ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ 5,070 ಕ್ಕೆ ಇಳಿದಿದೆ. ರಾಂಗ ಸೈಡ್​ ಡೆವಿಂಗ್​ ಬಗ್ಗೆ ಆರಂಭದಲ್ಲಿ 4,050ರಷ್ಟಿದ್ದ ಪ್ರಕರಣಗಳು ಪ್ರಸ್ತುತ 2,441ಕ್ಕೆ ಇಳಿಕೆಯಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮೂವರು ಸಂಚರಿಸುವ ಪ್ರಕರಣಗಳು ಮೊದಲ ವಾರದಲ್ಲಿ 3,174 ಇದ್ದದ್ದು, ಇತ್ತೀಚಿನ ವಾರದಲ್ಲಿ 1,036 ಕ್ಕೆ ಇಳಿದಿದೆ. ಭಾರಿ ವಾಹನಗಳ ಅತಿ ವೇಗದ ಚಾಲನೆಗೆ ಸಂಬಂಧಿಸಿದಂತೆ 3,170 ಪ್ರಕರಣಗಳು ದಾಖಲಾಗಿದ್ದು, ಇತ್ತೀಚಿನ ವಾರದಲ್ಲಿ ಕೇವಲ 997ಕ್ಕೆ ಇಳಿದಿದೆ.

LEAVE A REPLY

Please enter your comment!
Please enter your name here