ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
13

ಕಾರ್ಕಳ : ನೆಕ್ಲಾಜಿ ಶ್ರೀ ಕಾಳಿಕಾಂಬ ದೇವಸ್ಥಾನದ ಅಂಗ ಸಂಸ್ಥೆಯಾದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾಗಿ ಕವಿತಾ ಹರೀಶ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪೂರ್ಣಿಮಾ ನಿತ್ಯಾನಂದ, ಕಾರ್ಯದರ್ಶಿಯಾಗಿ ಮಲ್ಲಿಕ ಗಣೇಶ್, ಕೋಶಾಧಿಕಾರಿಯಾಗಿ ಪೂರ್ಣಿಮಾ ಜಯಂತ್ ಆಯ್ಕೆ ಆಗಿದ್ದಾರೆ ಮೊನ್ನೆ ತಾನೆ ನಡೆದ ಮಹಾಸಭೆಯಲ್ಲಿ ನೂತನ ಸಮಿತಿಯ 25 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.

ಮಹಾಸಭೆಯ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷರಾದ ನಳಿನಿ ವಿಜಯೇಂದ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷರು ನೆಕ್ಲಾಜೆ ದೇವಸ್ಥಾನದ ಮಾಜಿ ಆಡಳಿತ ಮೊಕ್ತೆಸರರು ಶಿಲ್ಪಿ ರಾಮಚಂದ್ರ ಆಚಾರ್ಯ ಜೊತೆ ಮೊಕ್ತೆಸರರಾದ ನಿಟ್ಟೆ ಸುರೇಶ್ ಆಚಾರ್ಯ ಪಿ ರವಿ ಆಚಾರ್ಯ ಹಾಗೂ ಪಿ ವಸಂತ ಆಚಾರ್ಯ ಮತ್ತು ಕೋಶಾಧ್ಯಕ್ಷೆ ಜ್ಯೋತಿ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಶೋಭಾ ಮತ್ತು ವಿಜಯ ಭಾಸ್ಕರ್ ನೆರವೇರಿಸಿ ಉಪಾಧ್ಯಕ್ಷರಾದ ಕವಿತಾ ಹರೀಶ್ ಸ್ವಾಗತಿಸಿದರು. ವರದಿ ವಾಚನವನ್ನು ಮತ್ತು ಕಾರ್ಯಕ್ರಮದ ನಿರ್ವಹಣೆಯನ್ನು ಕಾರ್ಯದರ್ಶಿಯವರಾದ ಗೀತ ಚಂದ್ರ ನೆರವೇರಿಸಿದರು.

LEAVE A REPLY

Please enter your comment!
Please enter your name here