ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

0
10

ಕಡಂದಲೆ: ದಿನಾಂಕ 11/07/2026 ರಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಹಾಗೂ ಮೆಡಲಿಯಾ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಿತ ವಿಜ್ಞಾನ ಪ್ರಯೋಗಲಾಯವನ್ನು ಶ್ರೀ ವಿರೂಪಾಕ್ಷಪ್ಪ ಹೆಚ್.ಎಸ್.ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಡಬಿದ್ರಿ ವಲಯ ಇವರು ಉದ್ಘಾಟಿಸಿದರು . ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಮಾನಂದ ಪಂಡಿತ್ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ಶ್ರೀ ಕೆ ಸುದರ್ಶನ್ ಶೆಟ್ಟಿ ರವರು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಪರಿಕರ ಗಳ ವಿತರಣೆಯನ್ನು ಶ್ರೀ ಅನಂತಕೃಷ್ಣರಾವ್ ಮಾಲಕರು ವಿಜಯಲಕ್ಷ್ಮಿ ಇಂಡಸ್ಟ್ರೀಸ್ ಮೂಡುಬಿದ್ರೆ ಇವರ ಮಗನಾದ ಶ್ರೀ ದುರ್ಗಾಪ್ರಸಾದ್ ರಾವ್ ಇವರು ನೆರವೇರಿಸಿದರು.ಈ ಸುಂದರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೂತನ ಟ್ರ್ಯಾಕ್ ಪ್ಯಾಂಟ್ ಮತ್ತು ಟೀ-ಶರ್ಟ್ ಗಳನ್ನು MRPL ONGC ಜನರಲ್ ಮ್ಯಾನೇಜರ್ ಆಗಿರುವ ಶ್ರೀ ಗೋಪಿರಾಮ್ ಇವರು ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು,ಇದರ ಸಂಸ್ಥಾಪಕರಾದ ಪ್ರೊಫೆಸರ್ ಶ್ರೀಶ ಭಟ್, ಶ್ರೀ ಹರೀಶ್ ಬಿ ಸಂಪನ್ಮೂಲ ವ್ಯಕ್ತಿಗಳು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆ ಕಟೀಲು, ಶ್ರೀ ಸುರೇಂದ್ರ ಭಟ್ ಅಧ್ಯಕ್ಷರು ಶಾಲಾ ಹಳೆ ವಿದ್ಯಾರ್ಥಿ ಸಂಘ, ಶ್ರೀ ದಿನಕರ ಕುಂಭಾಶಿ ಮುಖ್ಯ ಶಿಕ್ಷಕರು, ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಇದರ ಸದಸ್ಯರು, ಶಾಲಾ ಶಿಕ್ಷಕರು, ಶಿಕ್ಷಕೇತರ ವೃಂದ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಇವರೆಲ್ಲರ ಸಹಕಾರದಿಂದ ಈ ಕಾರ್ಯಕ್ರಮವು ಯಶಸ್ವಿ ಯಾಗಿ ನೆರವೇರಿತು.

LEAVE A REPLY

Please enter your comment!
Please enter your name here