ಮುಲ್ಕಿ: ನಂದಿಕೂರು ಬಳಿ ಭೀಕರ ಅಪಘಾತ ಸ್ಕೂಟರ್ ಸವಾರ ಸಾವು

0
48

ಮುಲ್ಕಿ: ನಂದಿಕೂರು ಬಳಿ ನಡೆದ ಸ್ಕೂಟರ್ ಅಪಘಾತದಲ್ಲಿ ಮುಲ್ಕಿ ಸಮೀಪದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಿವಾಸಿ ಯುವಕ ಸಾವನ್ನಪ್ಪಿದ್ದಾನೆ
ಮೃತ ಯುವಕನನ್ನು ಕಿರಣ್ ಕಟ್ಟಿಮನಿ (22) ಎಂದು ಗುರುತಿಸಲಾಗಿದೆ
ಮೃತ ಯುವಕ ಕಿರಣ್ ರವರು ಸ್ಕೂಟರ್ ನಲ್ಲಿ ಮುಲ್ಕಿ ಲಿಂಗಪ್ಪಯ್ಯಕಾಡಿನಿಂದ ನಂದಿಪೂರ್ ಕೈಗಾರಿಕಾ ಪ್ರದೇಶದಲ್ಲಿರುವ ಅವರ ತಂದೆಯ ಫ್ಯಾಕ್ಟರಿಗೆ ಸ್ಕೂಟರ್ ನಲ್ಲಿ ಊಟ ಕೊಡಲೆಂದು ಹೋಗುತ್ತಿರುವಾಗ ಪಡುಬಿದ್ರೆ ಬೆಳ್ಮಣ್ ರಾಜ್ಯ ಹೆದ್ದಾರಿಯ ನಂದಿಕೂರು ಜಂಕ್ಷನ್ ಬಳಿ ಸ್ಕೂಟರ್ ಸ್ಕಿಡ್ ಆಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ
ಮೃತ ಯುವಕ ಕಿರಣ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದು ಇತ್ತೀಚೆಗಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ. ಮೃತರು ತಂದೆ ಮುಲ್ಕಿ ಜೆಸಿ ಸಂಸ್ಥೆಯ ಮಾಜೀ ಅಧ್ಯಕ್ಷ ಮಲ್ಲಿಕಾರ್ಜುನ ಆರ್ ಕೆ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದು ಮನೆಯಲ್ಲಿ ರೋದನ ಮಗಿಲು ಮುಟ್ಟಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ

LEAVE A REPLY

Please enter your comment!
Please enter your name here