ಜು. 19ರಂದು ಅಳದಂಗಡಿಯಲ್ಲಿ ತುಳು ಸಿಂಗಾರ ಚೆನ್ನೆಮಣೆ ಕಾರ್ಯಕ್ರಮ

0
25

ಅಳದಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ ಇದರ ವತಿಯಿಂದ ಜುಲೈ 19 ಅಳದಂಗಡಿಯಲ್ಲಿ ತುಳು ಸಿಂಗಾರ ಚೆನ್ನೆಮಣೆ ಕಾರ್ಯಕ್ರಮ ಜರುಗಲಿದೆ.

ಅಳದಂಗಡಿ ಕೆದ್ದು ಸರಕಾರಿ ಪದವಿ ಪೂರ್ವ ವಿದ್ಯಾಲಯದ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಉಯ್ಯಾಲೆ ಸೇವಾ ವಿಭಾಗ ಉದ್ಘಾಟನೆ ಗೊಳ್ಳಲಿದೆ.
ತುಳು ಸಿಂಗಾರ ಅಂಗವಾಗಿ ಗ್ರಾಮೀಣ ಕಬಡ್ಡಿ ಪಂದ್ಯಾಟ, ಚೆನ್ನೆಮಣೆ ಸ್ಪರ್ಧೆ, ಹಾಗೂ ತುಳುನಾಡು ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಿಗೆ ಚಿತ್ರ ಸ್ಪರ್ಧೆ ನಡೆಯಲಿರುವುದು.

ಉಯ್ಯಾಲೆ ಸೇವೆ ಇಬ್ಬರೂ ವಿಶೇಷ ಚೇತನರಿಗೆ ಆರ್ಥಿಕವಾಗಿ ನೆರವು ಮತ್ತು 6 ಮಕ್ಕಳಿಗೆ ಸಹಾಯಧನ ನೀಡಲಾಗುವುದು. ಸಮಾರಂಭದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸುಮಂತ್ ಕುಮಾರ್ ಜೈನ್, ತುಳು ಮಹಾಸಭಾ ಇಂಟರ್ನ್ಯಾಷನಲ್ ಕರ್ನಾಟಕ ಇದರ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಅಧ್ಯಕ್ಷರು ಸಂಪತ್ ಬಿ. ಸುವರ್ಣ, ಸದಾನಂದ ಪೂಜಾರಿ ಉಂಗಿಲಬೈಲ್, ಶಾಂತಿ ಮರಿಯಾ ಸಲ್ದಾನ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ, ಸರಕಾರಿ ಪದವಿ ಪೂರ್ವ ವಿದ್ಯಾಲಯದ ಉಪನ್ಯಾಸಕರಾದ ಸದಾನಂದ, ಆಮಂತ್ರಣ ರಾಜ್ಯ ನಿರ್ದೇಶಕಿ ಉಮಾ ಸುನಿಲ್ ಹಾಸನ ಮತ್ತಿತರರು ಭಾಗವಹಿಸಲಿದ್ದಾರೆ.

ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿಕೊಡಬೇಕು ಎಂದು ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಶಿವಪ್ರಸಾದ್ ಅಜಿಲರು, ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್
ಮತ್ತು ಉಯ್ಯಾಲೆ ಸೇವಾ ವಿಭಾಗದ ಅಧ್ಯಕ್ಷೆ ಸೌಮ್ಯತಿಲಕ್ ಶೆಟ್ಟಿ ಹಾಗೂ ಕಾರ್ಯದರ್ಶಿ ಅಸ್ಮಿತ ಸುಧೀರ್ ಪಾಡಿಪಿಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here