ಮೂಡುಬಿದಿರೆ : ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಛಾಂಪಿಯನ್ ಷಿಪ್ ನಲ್ಲಿ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ. ಎ. ವಿದ್ಯರ‍್ಥಿನಿ ವಿಕ್ರೀತಾ ಗಣನೀಯ ಸಾಧನೆ ಮಾಡಿದ್ದಾರೆ.
ಮುಕ್ತ (ಓಪನ್) ಸ್ರ‍್ಧಾ ವಿಭಾಗದಲ್ಲಿ ರ‍್ನಾಟಕ ತಂಡವನ್ನು ಪ್ರತಿನಿಧಿಸಿದ ಇವರು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಹಾಗೂ ಹತ್ತೊಂಭತ್ತು ರ‍್ಷದ ಒಳಗಿನ (ಅಂಡರ್ -19) ಸ್ರ‍್ಧಾ ವಿಭಾಗದಲ್ಲಿ ರ‍್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಾಲ್ಪಾಡಿಯವರಾದ ವಿಕ್ರೀತಾ ತಮ್ಮ ಪದವಿಪರ‍್ವ ದಿನಗಳಿಂದಲೂ ಫ್ಲೋರ್ ಬಾಲ್ ಕ್ರೀಡೆಯಲ್ಲಿ ಆಸಕ್ತಿಯಿಂದ ಸಾಧನೆ ಮಾಡುತ್ತಾ ಅನೇಕ ರಾಷ್ಟ್ರಮಟ್ಟದ ವೈಯಕ್ತಿಕ – ಸಮಗ್ರ ಪ್ರಶಸ್ತಿಗಳನ್ನು ಈ ಕ್ರೀಡೆಯಲ್ಲಿ ಪಡೆದಿರುತ್ತಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಂಶುಪಾಲರು, ದೈಹಿಕ ಶಿಕ್ಷಣ ನರ‍್ದೇಶಕರು, ಬೋಧಕ – ಬೋಧಕೇತರ ಸಿಬ್ಬಂದಿ ಮತ್ತು ಸಹಪಾಠಿ ವಿದ್ಯರ‍್ಥಿಗಳು ಅಭಿನಂದಿಸಿದ್ದಾರೆ.

