ಉಚ್ಚಿಲದಲ್ಲಿ ಜುಲೈ 17ರಂದು ಆಧ್ಯಾತ್ಮಿಕ ಕಾರ್ಯಕ್ರಮ

0
12

ಉಚ್ಚಿಲ : ತುಳುವೆರಾ ತುಳು ಚಾವಡಿ, ಮಂಗಳೂರು ಇವರ ಆಯೋಜನೆಯಲ್ಲಿ ಜುಲೈ 17ರಂದು (ಶುಕ್ರವಾರ) ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪುರಿ ಶ್ರೀ ಜಗನ್ನಾಥ ದೇವರ ಮಹಿಮೆಯ ಮಹತ್ವ ಹಾಗೂ ಹರಿನಾಮದ ಮಹತ್ವದ ಅಭಿಯಾನ ಕುರಿತು ಭಕ್ತರಿಗೆ ವಿಶೇಷ ಸಂದೇಶ ನೀಡಲಾಗುವುದು. ಬೆಳಿಗ್ಗೆ 10.30 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ತುಳು ಭಾಷೆಯ ಪ್ರವಚನ, ಭಕ್ತಿ ಕೀರ್ತನೆ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಆಧ್ಯಾತ್ಮಿಕ ಮೌಲ್ಯಗಳು, ಹರಿನಾಮದ ಮಹತ್ವ ಹಾಗೂ ಶ್ರೀ ಜಗನ್ನಾಥ ದೇವರ ಕೃಪೆಯ ಕುರಿತು ಭಕ್ತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.