ಮಂಗಳೂರು : ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ ಪ್ರಮುಖ ಕಂಪನಿಯಾದ ‘ಆಮ್‍ವೇ ಇಂಡಿಯಾ’ ಆಧುನಿಕ ಪರಿಸರದ ಹಾನಿಕಾರಕ ಅಂಶಗಳಿಂದ ಚರ್ಮವನ್ನು ರಕ್ಷಿಸಲು ಅತ್ಯಾಧುನಿಕ ದೈನಂದಿನ ರಕ್ಷಣಾ ಪರಿಹಾರವಾದ ‘ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಮಲ್ಟಿ-ಡಿಫೆನ್ಸ್ ಯುವಿ ಪೆÇ್ರಟೆಕ್ಟ್’ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದು ನ್ಯೂಟ್ರಿಲೈಟ್ ಸಸ್ಯ ಮೂಲದ ಪೋಷಕಾಂಶ ಗುಣಗಳಿಂದ ಸಮೃದ್ಧವಾಗಿದೆ. ಈ ಹೊಸ ಬಿಡುಗಡೆಯು ‘ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್’ ಉತ್ಪನ್ನಗಳ ಶ್ರೇಣಿಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಶ್ರೇಣಿಯನ್ನು ಪ್ರಕೃತಿಯ ಒಳಿತು ಮತ್ತು ಅತ್ಯಾಧುನಿಕ ವಿಜ್ಞಾನವನ್ನು ಒಟ್ಟುಗೂಡಿಸಿ, ಆರೋಗ್ಯಕರವಾಗಿ ಕಾಣುವ ಚರ್ಮಕ್ಕಾಗಿ, ಪೆÇೀಷಣೆ ಆಧಾರಿತ ಸ್ಕಿನ್‍ಕೇರ್ ಪರಿಹಾರಗಳ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯತೆಗಳನ್ನು ಪೂರೈಸಲು ಅತ್ಯಂತ ಚಿಂತನಾಶೀಲವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಆಮ್‍ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಚೋಪ್ರಾ ಹೇಳಿದ್ದಾರೆ.
ಹೊಸ ‘ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಮಲ್ಟಿ-ಡಿಫೆನ್ಸ್ Uಗಿ ಪ್ರೋಟೆಕ್ಟ್’ ಅನ್ನು ಚರ್ಮದ ದೈನಂದಿನ ರಕ್ಷಣೆಯ ಅಗತ್ಯತೆಗಳನ್ನು ಪೂರೈಸಲು ಅತ್ಯಂತ ಚಿಂತನಾಶೀಲವಾಗಿ ರೂಪಿಸಲಾಗಿದೆ. ಇದು ಚರ್ಮದ ಮೇಲೆ ಅಕಾಲಿಕ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವಾಗುವ ಪರಿಸರದ ವಿವಿಧ ಹಾನಿಕಾರಕ ಅಂಶಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅತ್ಯಾಧುನಿಕ Uಗಿ ಫಿಲ್ಟರ್‍ಗಳು ಮತ್ತು ಆಂಟಿಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿರುವ ನ್ಯೂಟ್ರಿಲೈಟ್ ಸಸ್ಯ ಮೂಲದ ಪೆÇೀಷಕಾಂಶಗಳ ಶಕ್ತಿಯನ್ನು ಹೊಂದಿದೆ ಎಂದು ಪ್ರಕಟಣೆ ವಿವರಿಸಿದೆ.
ಅತ್ಯಾಧುನಿಕ ಚರ್ಮದ ವಿಜ್ಞಾನ ಮತ್ತು ನ್ಯೂಟ್ರಿಲೈಟ್ ತೋಟಗಳಲ್ಲಿ ಬೆಳೆದ ಸಸ್ಯ ಮೂಲದ ಪೆÇೀಷಕಾಂಶಗಳ ಶಕ್ತಿಯನ್ನು ಹೊಂದಿರುವ ‘ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಮಲ್ಟಿ-ಡಿಫೆನ್ಸ್ ಯುವಿ ಪ್ರೋಟೆಕ್ಟ್’, ಗೋಚರ ಬೆಳಕು (ಬ್ಲೂ ಲೈಟ್ ಸೇರಿದಂತೆ), ಇನ್‍ಫ್ರಾರೆಡ್ (ಅತಿಗೆಂಪು) ಬೆಳಕು ಮತ್ತು ಫ್ರೀ ರಾಡಿಕಲ್‍ಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ವಿವರಿಸಿದೆ.

