ಕುಲಾಲ ಸಂಘ ನಾನಿಲ್ತಾರು ವತಿಯಿಂದ ಜುಲೈ 26 ರಂದು ಆಟಿಡೊಂಜಿ ಕೂಟ

0
21

ಕಾರ್ಕಳ : ತುಳುನಾಡಿನಲ್ಲಿ ಆಟಿಯ ತಿಂಗಳಲ್ಲಿ ಸವಿಯುವ ಪ್ರಾಚೀನ ವಿಶೇಷ ತಿಂಡಿ ತಿನಿಸುಗಳನ್ನು ಯುವ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ತಾಲೂಕಿನ ಕುಲಾಲ ಸಂಘ (ರಿ ) ನಾನಿಲ್ತಾರು ವತಿಯಿಂದ ಜುಲೈ 26 ರಂದು ಸಂಘದ ಕುಲಾಲ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಆಟಿಡೊಂಜಿ ಕೂಟ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸ್ವಜಾತಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರು ಜಯರಾಮ ಕುಲಾಲ್ ಅಗರಟ್ಟ ಪ್ರಕಟಣೆಯಲ್ಲಿ ತಿಳಿಸಿರುವರು.