ರೇಡಿಯೊ ಮಣಿಪಾಲದಲ್ಲಿ ‘ಹೊಂಗಿರಣ’ ಸರಣಿಯ- 35ನೇ ಸಂಚಿಕೆ ಪ್ರಸಾರ

0
10

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಅರ್ಪಿಸುತ್ತಿದೆ ಹೊಂಗಿರಣ-ಹೊಸ ಭರವಸೆಗಳ ಸಂಕಿರಣ ಸರಣಿ ಜಾಗೃತಿ ಕಾರ್ಯಕ್ರಮ. ಈ ಸರಣಿಯ 35 ನೇ ಸಂಚಿಕೆ ಜುಲೈ ತಿಂಗಳ ದಿನಾಂಕ 16 ರಂದು ಗುರುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮವನ್ನು ಆಪ್ತ ಸಮಾಲೋಚಕರಾದ ಸ್ವರ್ಣ ಕುಂದಾಪುರ ನಡೆಸಿಕೊಡಲಿದ್ದಾರೆ. ಜುಲೈ 17 ರಂದು ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.