28ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ

0
40

ದ ಕ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಜುಲೈ 22ರಂದು ಸ್ಮಾರ್ಟ್ ಸಿಟಿ ಫುಟ್ಬಾಲ್ ಗ್ರೌಂಡ್ ನಲ್ಲಿ 28ನೇ ವರ್ಷದ ಇಂಡಿಪೆಂಡೆನ್ಸ್ ಫುಟ್ಬಾಲ್ ಪಂದ್ಯಾಟ ನಡೆಯಲಿದೆ. ಸುಮಾರು 25 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಇಂಜಿನಿಯರಿಂಗ್, ಮೆಡಿಕಲ್, ತಾಂತ್ರಿಕ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಸುಮಾರು 200 ಕಿಂತ ಹೆಚ್ಚಿನ ತಂಡಗಳು ನೋಂದಣಿ ಮಾಡಿರುತ್ತವೆ.

ಫುಟ್ಬಾಲ್ ಕ್ರೀಡಾಂಗಣವು ಅಳವಡಿಸಿಕೊಂಡು ಅಭಿವೃದ್ಧಿಗೊಂಡಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಲು ಅನುಕೂಲಕರವಾಗಿದೆ. ಆದರೆ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಇದೆ. ಅವುಗಳನ್ನು ಮಾಡಿಕೊಡುವಂತೆ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಭರವಸೆಯು ದೊರಕಿದೆ. ಜಿಲ್ಲೆಯ ಕೆಲವು ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯುವ ಕ್ಲಬ್ ಫುಟ್ಬಾಲ್ ಲೀಗ್ ನಲ್ಲಿ ಹಾಡುವ ಅವಕಾಶವು ಸಿಕ್ಕಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿಎಂ ಅಸ್ಲಾಂ, ಕಾರ್ಯದರ್ಶಿ ಹುಸೇನ್ ಬೋಳಾರ್, ಬಿಬಿ ತೋಮಸ್, ಫಿರೋಜ್, ಅನಿಲ್ ಪಿವಿ, ವಿಜಯ ಸುವರ್ಣ ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್