ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಅಗ್ನಿಹೋತ್ರ ಮತ್ತು ಸಾಮೂಹಿಕ ಪ್ರಾರ್ಥನೆ

0
28

ಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರ, ಹೆಬ್ರಿ ಇಲ್ಲಿ ಇಂದು ಅತಿಥಿಗಳ ಸಮ್ಮುಖದಲ್ಲಿ ದೈನಂದಿನ ಸಾಮೂಹಿಕ ಪ್ರಾರ್ಥನೆ ಮತ್ತು ಅಗ್ನಿಹೋತ್ರ ಕಾರ್ಯಕ್ರಮವು ಭಕ್ತಿ ಪೂರ್ಣ ವಾತಾವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀರಾಮ ವಿದ್ಯಾ ಕೇಂದ್ರ, ಸುಲ್ಕೆರೆ ಇದರ ಮುಖ್ಯಸ್ಥರಾದ ಗಣೇಶ ಹೆಗ್ಡೆ ರವರು ಮತ್ತು ಅವರ ಧರ್ಮಪತ್ನಿ ವೃಂದಾ ರವರು ಆಗಮಿಸಿ, ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ಅಗ್ನಿಹೋತ್ರವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ ಹೆಗ್ಡೆ ರವರು, “ವಿದ್ಯಾರ್ಥಿಗಳ ಸಂಸ್ಕಾರವನ್ನು ಉದ್ದೀಪನಗೊಳಿಸುವಲ್ಲಿ ಶ್ರಮಿಸುತ್ತಿರುವ ಈ ವಿದ್ಯಾ ಸಂಸ್ಥೆಯ ಶ್ರೀಮಾನ್ ಮತ್ತು ಮಾತಾಜಿಯವರ ಕರ್ತವ್ಯ ಶ್ಲಾಘನೀಯ” ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಅಮೃತ ಭಾರತಿ ಟ್ರಸ್ಟ್ (ರಿ.) ನ ಕಾರ್ಯದರ್ಶಿಗಳಾದ ಶ್ರೀಯುತ ಗುರುದಾಸ್ ಶೆಣೈ ರವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ ರವರು ವಂದನಾರ್ಪಣೆ ಮಾಡಿದರು.

ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.