ಕೋರ್ಟ್​ ಆದೇಶಕ್ಕೆ ಮಣಿದು ಹೊಸ ಸ್ಕೂಟರ್​ ನೀಡಿದ ಓಲಾ

0
64


ಉಡುಪಿ: ಓಲಾ ಇಲೆಕ್ಟ್ರಿಕ್​ ಸ್ಕೂಟರ್​ ದುರಸ್ತಿ ಮಾಡಿಕೊಡಲು ವಿಳಂಬಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಗ್ರಾಹಕ ನ್ಯಾಯಾಲಯ ಆದೇಶಕ್ಕೆ ಮಣಿದ ಕಂಪೆನಿ ಗ್ರಾಹಕರಿಗೆ ಹೊಸ ಸ್ಕೂಟರ್​ ನೀಡಿದೆ.
ಹೆಬ್ರಿಯ ಸುನೀತಾ ಎಂಬ ಗ್ರಾಹಕರು ಬೆಂಗಳೂರಿನ ಓಲಾ ಇಲೆಕ್ಟ್ರಿಕ್​ ಟೆಕ್ನಾಲಜೀಸ್​ ಕಂಪೆನಿ ಇವರಿಂದ ಸ್ಕೂಟರ್​ ಖರೀದಿಸಲು ರೂ.1,41,648 ಪಾವತಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಸ್ಕೂಟರ್​ನಲ್ಲಿ ಚಾರ್ಜಿಂಗ್​ ತೊಂದರೆ ಕಾಣಿಸಿದ್ದು, ಈ ಸಮಸ್ಯೆಯನ್ನು ಸರಿಪಡಿಸದೆ ಕಂಪೆನಿಯವರು ಸೇವಾ ನ್ಯೂನತೆ ಮಾಡಿದ್ದು, ಗ್ರಾಹಕರು ಕಂಪೆನಿಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ, ಸ್ಕೂಟರ್​ನಲ್ಲಿರುವ ಚಾರ್ಜಿಂಗ್​ ತೊಂದರೆ ನಿವಾರಿಸಿಕೊಡಬೇಕು ಅಥವಾ ವಾಹನವನ್ನು ಬದಲಾಯಿಸಿಕೊಡುವಂತೆ ಆದೇಶಿಸಿದ ಮೇರೆಗೆ ಕಂಪೆನಿಯವರು ಗ್ರಾಹಕರಿಗೆ ಹೊಸ ಸ್ಕೂಟರ್​ ನೀಡಿದ್ದಾರೆ. ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ.15,000 ಹಾಗೂ ವ್ಯಾಜ್ಯದ ವೆಚ್ಚ ರೂ.5,000 ನೀಡುವಂತೆ ಕೋರ್ಟ್​ ಆದೇಶಿಸಿದೆ. ಬಳಕೆದಾರರ ವೇದಿಕೆಯ ಈ ವ್ಯಾಜ್ಯವನ್ನು ಗ್ರಾಹಕರ ಪರವಾಗಿ ಎನ್​.ಆರ್​.ಗೋವಿಂದ್​ ವಾದಿಸಿದ್ದರು.