ಯುವಕ ಮಂಡಲ (ರಿ ) ಕುತ್ಯಾರು ವತಿಯಿಂದ ಕುತ್ಯಾರು ಭಾಗದ ಎರಡು ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು

0
34

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ ) ಕುತ್ಯಾರು ವತಿಯಿಂದ ಕುತ್ಯಾರು ಭಾಗದ ಎರಡು ಕುಟುಂಬಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು.

ಕಾಪು : ತಾಲೂಕಿನ ಕುತ್ಯಾರುವಿನ ಯುವಕ ಮಂಡಲ(ರಿ ) ಕುತ್ಯಾರು ಇದರ ಸದಸ್ಯರು ಹಾಗೂ ದಾನಿಗಳಿಂದ ಕುತ್ಯಾರುವಿನ ರಘುನಾಥ ಆಚಾರ್ಯ ಹಾಗೂ ಲೋಕು ಮೂಲ್ಯ ಇವರ ವೈದ್ಯಕೀಯ ಚಿಕಿತ್ಸೆಗೆ ಸಂಗ್ರಹಗೊಂಡ ಒಟ್ಟು ಮೊತ್ತವನ್ನು ಮಂಗಳವಾರ ನೀಡಲಾಯಿತು,ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.