ಹಾವಂಜೆಯಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ; ರಾಯಲ್ ರತ್ನಾಕರ್ ಶೆಟ್ಟಿ ಅವರ ಸಾಮಾಜಿಕ ಸೇವೆಗೆ ಮೆಚ್ಚುಗೆ

0
76

ಹಾವಂಜೆ : ಗ್ರಾಮದ ಕೊಳಲಗಿರಿ ದೊಂಪದ ಕುಮೇರಿ ಪ್ರದೇಶದಲ್ಲಿ, ಬ್ಯಾಂಕ್ ಆಫ್ ಬರೋಡ ಎದುರಿನ ಬಸ್ ನಿಲ್ದಾಣವನ್ನು ದಿವಂಗತ ರಾಘವೇಂದ್ರ ರಾವ್ ಆರೂರು ದಂಪತಿ ಅವರ ಸವಿನೆನಪಿಗಾಗಿ ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಉದ್ಯಮಿ ಹಾಗೂ ಸಮಾಜಸೇವಕ ರಾಯಲ್ ರತ್ನಾಕರ್ ಶೆಟ್ಟಿ ಅವರು ನವೀಕರಿಸಿ ನಿರ್ಮಿಸಿಕೊಟ್ಟಿದ್ದು, ನೂತನ ಬಸ್ ನಿಲ್ದಾಣವನ್ನು ಶ್ರೀ ಶ್ರೀ ರಮಾನಂದ ಗುರೂಜಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸದಾಶಿವ ಹೆಗ್ಡೆ (ತನಿಷ್ಕ ಹಾವಂಜೆ ಬಾಣಬೆಟ್ಟು), ಉದ್ಯಮಿ ಕೃಷ್ಣ ನಾಯಕ್, ಗಣೇಶ್ ಸ್ಟೋರ್‌ನ ಗಣೇಶ್, ಹಾವಂಜೆ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಎನ್. ಮಂಜುನಾಥ ಅಡಿಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಂಧತಿ, ದಿವಂಗತ ರಾಘವೇಂದ್ರ ರಾವ್ ಆರೂರು ಅವರ ಅಭಿಮಾನಿಗಳ ಬಳಗ, ಗ್ರಾಮಸ್ಥರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯೋಗೇಶ್ ಗಾಣಿಗ, ಹಾವಂಜೆ ಅವರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹಾವಂಜೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಅವರು ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದ ಸಮಾಜಮುಖಿ ಲೇಖನವನ್ನು ಸ್ಮರಿಸಿದರು.

ಉಡುಪಿ ಜಿಲ್ಲೆಯ ಹೆಸರಾಂತ ಉದ್ಯಮಿ ರಾಯಲ್ ರತ್ನಾಕರ್ ಶೆಟ್ಟಿ ಅವರು ಸಮಾಜಮುಖಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಅವರು ರಾಯಲ್ ರತ್ನಾಕರ್ ಶೆಟ್ಟಿ ಹಾಗೂ ಅವರ ಕುಟುಂಬದವರು ಇನ್ನಷ್ಟು ಸಮಾಜಸೇವಾ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಅಭಿನಂದನೆ ಸಲ್ಲಿಸಿ, ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಸಮೃದ್ಧಿಯನ್ನು ಶ್ರೀದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.