ಅಮೃತ ಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿಯಲ್ಲಿ ಭಾವಪೂರ್ಣ ಕಾರ್ಗಿಲ್ ವಿಜಯ ದಿನಾಚರಣೆ

0
60

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ ವತಿಯಿಂದ “ಕಾರ್ಗಿಲ್ ಯೋಧರಿಗೆ ಅಮೃತ ನಮನಗಳು” ಎಂಬ ಘೋಷವಾಕ್ಯದೊಂದಿಗೆ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ದಿನಾಂಕ 27-07-2026 ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಭಾರತಿ PU ಕಾಲೇಜಿನ ಅಧ್ಯಕ್ಷರಾದ ಎಚ್. ರಾಜೇಶ್ ನಾಯಕ್ ರವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ನಿವೃತ್ತ ಯೋಧರಾದ ಆನಂದ್ ಕಬ್ಬಿನಾಲೆ ರವರು ಆಗಮಿಸಿ , ಕಾರ್ಗಿಲ್ ಯುದ್ಧದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮವು ಕಾರ್ಗಿಲ್ ಹುತಾತ್ಮರಿಗೆ 2 ನಿಮಿಷ ಮೌನ ಪ್ರಾರ್ಥನೆ*ಯೊಂದಿಗೆ ಪ್ರಾರಂಭವಾಯಿತು. ನಂತರ *ಗಣ್ಯರಿಂದ ಕಾರ್ಗಿಲ್ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ವಿಡಿಯೋ ಚಿತ್ರ ತುಣುಕುಗಳನ್ನು ಪ್ರದರ್ಶಿಸಲಾಯಿತು. ಇದು ಎಲ್ಲರಲ್ಲಿ ದೇಶಭಕ್ತಿಯನ್ನು ಹೆಚ್ಚಿಸಿತು ಮತ್ತು ಯೋಧರ ತ್ಯಾಗದ ಮಹತ್ವವನ್ನು ನೆನಪಿಸಿತು.

ವಿದ್ಯಾರ್ಥಿಗಳು ದೇಶಭಕ್ತಿಯ ನೃತ್ಯ ಮತ್ತು ಗೀತೆಗಳ ಮೂಲಕ ಯೋಧರಿಗೆ ಅಮೃತ ನಮನ ಸಲ್ಲಿಸಲಾಯಿತು.

ಅಧ್ಯಕ್ಷರಾದ ಎಚ್. ರಾಜೇಶ್ ನಾಯಕ್ ರವರು ಮಾತನಾಡಿ, “ಇಂದಿನ ಯುವಜನತೆಯಲ್ಲಿ ದೇಶಭಕ್ತಿ ಮತ್ತು ಸಮರ್ಪಣೆಯ ಅಗತ್ಯತೆ ಅತೀ ಮುಖ್ಯವಾಗಿದೆ. ಕಾರ್ಗಿಲ್ ಯೋಧರ ತ್ಯಾಗವನ್ನು ನೆನಪಿಸಿಕೊಂಡು ನಾವೆಲ್ಲರೂ ರಾಷ್ಟ್ರ ಸೇವೆಗೆ ಸದಾ ಸಿದ್ಧರಾಗಿರಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆನಂದ್ ಕಬ್ಬಿನಾಲೆ ಅವರನ್ನು ಕಾಲೇಜು ವತಿಯಿಂದ ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶಿಸ್ತು ಮತ್ತು ರಾಷ್ಟ್ರಸೇವೆಯ ಮಹತ್ವದ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟಿನ ಅಧ್ಯಕ್ಷರಾದ ಸಿ.ಎ.ಎಂ. ರವಿರಾವ್, ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಟ್ರಸ್ಟಿ ಎಚ್.ಬಾಲಕೃಷ್ಣ ಮಲ್ಯ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತು. ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿ, ವಂದಿಸಿದರು. ಅಕ್ಷಯ್ ಅಶೋಕ್ ಅತಿಥಿಗಳ ಪರಿಚಯ ಹಾಗೂ ಸ್ವಾಗತಿಸಿದರು.