ಒಮಾನ್‌ನಲ್ಲಿ ಸಾಣೂರು ಮೂಲದ ಯುವಕ ಮೃತ

0
58

ಮೂಡುಬಿದಿರೆ : ಉದ್ಯೋಗ ನಿಮಿತ್ತ ಒಮಾನ್‌ನಲ್ಲಿ ನೆಲೆಸಿದ್ದ ಮೂಡುಬಿದಿರೆ ತಾಲೂಕಿನ ಸಾಣೂರು ಗ್ರಾಮದ ಮೂಲಗುತ್ತು ಮನೆಯ ರಾಜವರ್ಮ ಜೈನ್ (33) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ .

ಲಭ್ಯ ಮಾಹಿತಿಯಂತೆ, ರಾಜವರ್ಮ ಜೈನ್ ಅವರು ಒಮಾನ್‌ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಜುಲೈ 27ರಂದು ಕಂಪನಿಯ ಆವರಣದಲ್ಲಿ ಕೆಲಸದ ವೇಳೆ ಮತ್ತೋರ್ವ ಸಿಬ್ಬಂದಿ ವಾಹನವನ್ನು ರಿವರ್ಸ್ ತೆಗೆಯುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ರಾಜವರ್ಮ ಅವರು ವಾಹನದಡಿಗೆ ಸಿಲುಕಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಭಾರತಕ್ಕೆ ತರಲು ಅಗತ್ಯ ಕ್ರಮಗಳನ್ನು ಕುಟುಂಬಸ್ಥರು ಹಾಗೂ ಸಂಬಂಧಿತ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.