ಜಾನಪದ ಸಂಸ್ಕೃತಿ, ಸಂಸ್ಕಾರ ಉಳಿವಿಗೆ ಕರೆ
ನಮ್ಮ ಸಾಂಸ್ಕೃತಿಕ ಬೇರುಗಳಾದ ಜಾನಪದ ಕಲೆ, ಆಚಾರ-ವಿಚಾರ ಹಾಗೂ ಸಾಹಿತ್ಯವನ್ನು ಯುವಜನತೆಯಲ್ಲಿ ಜೀವಂತವಾಗಿಡುವುದು ಇಂದಿನ ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಕಾಲೇಜು ಮೂಡುಬಿದಿರೆ ಇವುಗಳ ಜಂಟಿ ಸಹಯೋಗದಲ್ಲಿ ‘ಜಾನಪದ ರಸಪ್ರಶ್ನೆ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ.
ಬರುವ ಆಗಸ್ಟ್ 7, 2026ರ ಶುಕ್ರವಾರದಂದು ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 1:00 ರಿಂದ 4:00 ಗಂಟೆಯವರೆಗೆ ಜಾನಪದ ರಸಪ್ರಶ್ನೆ ಸ್ಪರ್ಧೆ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ.
ದೀಪ ಪ್ರಜ್ವಲನೆ-
ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಭಾಧ್ಯಕ್ಷತೆ:- ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ ಮೂಡುಬಿದಿರೆಯ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ನಿಡ್ಡೋಡಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಗೌರವ ಉಪಸ್ಥಿತಿ:- ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಅತಿಥಿಗಳ ಉಪಸ್ಥಿತಿ:- ಡಾ. ಮಂದಾರ ರಾಜೇಶ್ ಭಟ್ ಉಪಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಅಗರಿ ರಾಘವೇಂದ್ರ ರಾವ್ ಅಗರಿ ಎಂಟರ್‌ಪ್ರೈಸಸ್, ಕೆ. ಭುವನಾಭಿರಾಮ ಉಡುಪ ಯುಗಪುರುಷ, ಕಿನ್ನಿಗೋಳಿ, ರಾಜೇಶ್ ಸೈಲಾರ್ಕ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಡಾ. ರಾಜೇಶ್ ಆಳ್ವ ತುಳುವಲ್ಡ್ ಫೌಂಡೇಶನ್ ಇವರುಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ನಿರ್ವಹಣೆ:- ಕರ್ನಾಟಕ ಜಾನಪದ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಸಂಚಾಲಕರಾದ ಶ್ರೀಮತಿ ಚೇತನಾ ರಾಜೇಂದ್ರ ಹೆಗ್ಡೆ ಅವರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ಸ್ವಾಗತ ಹಾಗೂ ಆಹ್ವಾನ:- ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ ಮೂಡುಬಿದಿರೆಯ ಕಾರ್ಯದರ್ಶಿ ಮಲ್ಲಿಕಾ ಸುರೇಶ್ ಹಾಗೂ ಅಧ್ಯಕ್ಷರಾದ ಪದ್ಮಶ್ರೀ ಭಟ್ ಅವರು ಎಲ್ಲ ಕಲಾಪ್ರೇಮಿಗಳನ್ನು ಹಾಗೂ ಸಾರ್ವಜನಿಕರನ್ನು ಪ್ರೀತಿಯ ಗೌರವ ಪೂರ್ವಕ ಆಮಂತ್ರಣ ನೀಡಿದ್ದಾರೆ
ಆಧುನಿಕತೆಯ ಆಡಂಬರದಲ್ಲಿ ನಮ್ಮ ಮೂಲ ಜಾನಪದ ಸಂಸ್ಕೃತಿ ಮತ್ತು ಗ್ರಾಮೀಣ ಪ್ರತಿಭೆಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ವಿದ್ಯಾರ್ಥಿಗಳಿಗೆ ಹಾಗೂ ಯುವ ಪೀಳಿಗೆಗೆ ಇಂತಹ ‘ಜಾನಪದ ರಸಪ್ರಶ್ನೆ’ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ.
ಜಾನಪದವು ಕೇವಲ ಮನರಂಜನೆಯಲ್ಲ, ಅದು ನಮ್ಮ ಹಿರಿಯರು ಉಳಿಸಿ ಬೆಳೆಸಿಕೊಂಡು ಬಂದ ಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳ ಪ್ರತಿಬಿಂಬ. ಇಂತಹ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ಆಚಾರ-ವಿಚಾರ, ಪರಂಪರೆ ಮತ್ತು ಜಾನಪದ ಅರಿವನ್ನು ಮೂಡಿಸಲು ಸಾಧ್ಯ. ನಮ್ಮ ಬೇರುಗಳನ್ನು ಮರೆಯದೆ, ಸಮಾಜದಲ್ಲಿ ಜಾನಪದ ಕಲೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

