ಆ.2ರಂದು ಭರತಾಂಜಲಿಯಿಂದ ಗುರು ಪೂರ್ಣಿಮಾ

0
7

ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ನೃತ್ಯ ಸಂಸ್ಥೆಯು ಗುರು ಪೂರ್ಣಿಮಾ ಗುರುನಮನ ಮಾತಾಪಿತರ ಚರಣ ಪೂಜನ ಹಾಗೂ ನೃತ್ಯ ನಮನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಮತ್ತು ಕೇಂದ್ರ ಸರಕಾರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಇದೇ ಬರುವ ದಿನಾಂಕ 2ನೇ ಆದಿತ್ಯವಾರ ಸಂಜೆ ಗಂಟೆ 4 ರಿಂದ ಶ್ರೀ ಕ್ಷೇತ್ರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ನಾದಸ್ವರ ವಿದ್ವಾಂಸರಾದ ನಾಗೇಶ್ ಬಪ್ಪನಾಡು ಇವರಿಗೆ ಗುರುನಮನ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷರಾದ ಧರ್ಮೇಂದ್ರ ಗಣೇಶಪುರ, ಧಾರ್ಮಿಕ ಮುಖಂಡರಾದ ವಿಶ್ವೇಶ್ವರ ಬದವಿದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಭರತಾಂಜಲಿಯ ನಿರ್ದೇಶಕರಾದ ಗುರು ಶ್ರೀಧರ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.