ಗುರುಪೂರ್ಣಿಮಾ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ

0
8

ಮಂಗಳೂರು : Gana Lahari Melodies musical Studio urwa Mangalore ಇಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ವ್ಯವಸ್ಥಾಪಕಿ ಸರೋಜಾ ರಾವ್ ರವರಿಗೆ ಶಾಲು ಹೊದಿಸಿ ಫಲಪುಷ್ಪ ಮಲಾರ್ಪಣೆ ಮಾಡಿ ಗೌರವಿಸಲಾಯಿತು.

ಈಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಹಾಗೂ ಅನುಭವಿ ಸದಸ್ಯರಾದ ಮುರಳೀಧರ್ ಕಮತ್ ಹಾಗೂ ಶೋಭಾ ದೇವಾಡಿಗ ಗುರುವಿನ ಹಾಗೂ ಗುರುವಂದನದ ಮಹತ್ವವನ್ನು ಕುರಿತು ಹಿತವಚನವಿತ್ತರು ಕಾರ್ಯಕ್ರಮದಲ್ಲಿ ಸಂಸ್ಥೆಯ ಸಲಹೆಗಾರರಾದ ಸಂತೋಷ್ ಅಂಚನ್ ಹಾಗು ಸಂಸ್ಥೆಯ ಎಲ್ಲಾ ಹಿರಿಯ ಕಿರಿಯ ಸದಸ್ಯರು ಪಾಲ್ಗೊಂಡಿದ್ದರು ಲಘು ಉಪಹಾರ ಹಾಗೂ ಸುಸ್ರಾವ್ಯ ಗೀತೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.