ಅಲಯನ್ಸ್ ಗ್ರೀನ್ ಪೋಸ್ಟರ್ ಅವಾರ್ಡ್ಸ್ 2026-27 : ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಯಶಸ್ವಿ

0
30

ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್, ಜಿಲ್ಲೆ 275 S ವತಿಯಿಂದ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಅಲಯನ್ಸ್ ಗ್ರೀನ್ ಪೋಸ್ಟರ್ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಹಿರಿಯ ಮತ್ತು ಕಿರಿಯ ವಿಭಾಗದ ಆಯ್ಕೆ ಪ್ರಕ್ರಿಯೆಯು ಅಮೃತ ಭಾರತಿ ವಿದ್ಯಾ ಕೇಂದ್ರ, ಹೆಬ್ರಿಯ ಅನ್ನಪೂರ್ಣ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಅತ್ಯುತ್ತಮ ಕಲಾಕೃತಿಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಮತ್ತು ಇಂಟರ್ನ್ಯಾಷನಲ್ ಡೈರೆಕ್ಟರ್ ಶ್ರೀಧರ್ ಶೇನವ ರವರು,
“ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳ ಮೂಲಕ ಪರಿಸರ ಪ್ರಜ್ಞೆಯನ್ನು ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
ಅವರು ಇನ್ನೂ ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಮುಕ್ತ ಶಾಲೆ, ನೀರಿನ ಸಂರಕ್ಷಣೆ ಮತ್ತು ಹಸಿರು ಭೂಮಿಯನ್ನು ಉಳಿಸುವುದು ನಮ್ಮ ಭವಿಷ್ಯದ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಗುರುದಾಸ್ ಶೆಣೈ ರವರು, “ಸಮಾಜಮುಖಿ ಕೆಲಸಗಳಿಗೆ ಅಮೃತ ಭಾರತಿ ಸರ್ವದಾ ಸಿದ್ಧ” ಎಂದು ಹೇಳಿದರು.
ಈ ಹಿಂದೆಯೂ ನಾವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೂಲಕ ಪರಿಸರ ಸಂರಕ್ಷಣೆಗೆ ಕೈಗೊಂಡ ಕ್ರಮಗಳನ್ನು ಅವರು ನೆನಪಿಸಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಅಧ್ಯಕ್ಷರು – ಶೈಲೇಶ್ ಕಿಣಿ , ಸಂಸ್ಥೆಯ ಪಿ.ಆರ್.ಓ- ವಿಜಯ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರು- ಅರುಣ್, ಮುಖ್ಯೋಪಾಧ್ಯಾಯಿನಿ-ಶಕುಂತಲಾ, ಸುಗೀತಾ ಮಾತಾಜಿ. ಅಲಯನ್ಸ್ ಕ್ಯಾಬಿನೆಟ್ ಸೆಕ್ರೆಟರಿ- ಕೆ. ರಾಮಚಂದ್ರ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು.

ಹೆಬ್ರಿ ಅಲಯನ್ಸ್ ಕ್ಲಬ್ ಅಧ್ಯಕ್ಷರು-ಬಾಲಚಂದ್ರ ಎಂ ರವರು ವಂದನಾರ್ಪಣೆ ಮಾಡಿದರು. ಸದಸ್ಯರು- ಇಂದಿರಾ ಬಾಯಾರಿ, ಕೃಷ್ಣರಾಜ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.