ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ – 150ನೇ ಸೇವಾ ಯೋಜನೆ

0
32

ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ರೂ 20,000/- ಆಹಾರ ಸಾಮಗ್ರಿ ಕೊಡುಗೆ ಹಸ್ತಾಂತರ

ನಿರಂತರ ಸಮಾಜಮುಖಿ ಸೇವಾ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ 26ನೇ ವರ್ಷಾಚರಣೆ ಅಂಗವಾಗಿ ಅಬ್ಬನಡ್ಕ ಸೇವಾ ಟ್ರಸ್ಟಿನ 150ನೇ ಸೇವಾ ಯೋಜನೆ ಅಂಗವಾಗಿ ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ರೂ.20,000 ಮೌಲ್ಯದ ಆಹಾರ ಸಾಮಾಗ್ರಿ ಕೊಡುಗೆ ಹಸ್ತಾಂತರಿಸಲಾಯಿತು.

ಜಾತಿ, ಧರ್ಮದ ಭೇದ ಭಾವವಿಲ್ಲದೆ ತನ್ನ ಕುಟುಂಬವೆಂಬಂತೆ ಅನಾಥರು, ಹಿರಿಯ ನಾಗರಿಕರು ಮತ್ತು ಮಾನಸಿಕ ಅಸ್ಥಿರತೆ ಉಳ್ಳ ಅಸಹಾಯಕ ವ್ಯಕ್ತಿಗಳಿಗೆ ಆಶ್ರಯ ಹಾಗೂ ಆರೈಕೆ ಮಾಡುತ್ತಿರುವವರು ಅನಾಥರ ಪಾಲಿನ ಆಶಾಕಿರಣ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಸಂಚಾಲಕರಾದ ಸಂದೀಪ್ ವಿ. ಪೂಜಾರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಸುರೇಶ ಅಬ್ಬನಡ್ಕ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆಮ್ಮಣ್ಣು ಪ್ರದೀಪ್ ಸುವರ್ಣ, ಅಬ್ಬನಡ್ಕ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಪ್ರೇಮ್ ಕುಲಾಲ್ ಇನ್ನಾ, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬಿರೋಟ್ಟು, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸರಬೈಲು, ರಾಜೇಶ ಕೋಟ್ಯಾನ್‌, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್‌, ಸದಸ್ಯರಾದ ಲೀಲಾ ಪೂಜಾರಿ, ಹರಿಣಿ ಪೂಜಾರಿ, ಸಂಧ್ಯಾ ಶೆಟ್ಟಿ, ಹರೀಶ್ ಪೂಜಾರಿ, ವೀಣಾ ಆಚಾರ್ಯ, ಸುಭಾಷ್ ಕೆಮ್ಮಣ್ಣು, ಶ್ರೀಕಾಂತ್ ಆಚಾರ್ಯ, ವೀಣಾ ಪೂಜಾರಿ, ಪದ್ಮಶ್ರೀ ಪೂಜಾರಿ ಮೊದಲದವರು ಉಪಸ್ಥಿತರಿದ್ದರು.

ಅಬ್ಬನಡ್ಕ ಸೇವಾ ಟ್ರಸ್ಟಿನ 150 ಸೇವಾ ಯೋಜನೆಗಳ ಮೂಲಕ ಈವರೆಗೆ ರೂ. 17,86,973/- ಮೊತ್ತವನ್ನು ನೀಡಿರುತ್ತಾರೆ.