ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ ವತಿಯಿಂದ ಗುರುನಮನ ಹಾಗೂ ವೇದಬ್ರಹ್ಮಕೀರ್ತಿಶೇಷ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಸಂಸ್ಮರಣಾರ್ಥ ಯುವ ‘ಪುರೋಹಿತ ಶ್ರೀ’ ಪುರಸ್ಕಾರ ಕಾರ್ಯಕ್ರಮವನ್ನು ಇದೇ ಶನಿವಾರ ಆ.7ರಂದು ಸಂಜೆ 5 ಗಂಟೆಗೆ ಪಾಂಡೇಶ್ವರದ ಗುರುನರಸಿಂಹ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸೋಮೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಬಾಶ್ರೀ , ಶಕ್ತಿನಗರ ದೇವಿ ಭಜನಾ ಮಂಡಳಿಯ ಅರ್ಚಕರಾದ ಸುಬ್ರಹ್ಮಣ್ಯ ಹೊಳ್ಳ ಇವರಿಗೆ ಗುರುನಮನ ಸಲ್ಲಿಸಲಿದ್ದು, ವೇದಬ್ರಹ್ಮ ಕೀರ್ತಿಶೇಷ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಸಂಸ್ಮರ್ಣಾರ್ಥ ಯುವ ಪುರೋಹಿತಶ್ರೀ ಪುರಸ್ಕಾರವನ್ನು ಸಂಸ್ಕೃತ ವಿದ್ವಾಂಸರಾದ ಪೈಕ ವೆಂಕಟರಮಣ ಭಟ್ ಇವರಿಗೆ ಗೌರವಧನ ಸಹಿತ ನೀಡಲಾಗುವುದು ಎಂದು ಸಂಸ್ಥೆಯ ಕಾ ಗೋಪಾಲಕೃಷ್ಣ ಮಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ ಹೊಳ್ಳರ ಅಧ್ಯಕ್ಷತೆಯಲ್ಲಿ, ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ ಎಸ್ ಮಹಾಬಲೇಶ್ವರ ಭಟ್, ಉದ್ಯಮಿ ರಘುನಾಥ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
