ಕಾರ್ಮಿಕರ ನ್ಯಾಯಯುತ ಹಕ್ಕುಗಳಿಗಾಗಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

0
5

ಭಾರತೀಯ ಮಜ್ದೂರ್ ಸಂಘದಿಂದ ಆಗಸ್ಟ್ 18ರಂದು ಮಂಗಳೂರು ಟೌನ್ ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಲಿದೆ. ಭಾರತೀಯ ಮಜ್ದೂರ್ ಸಂಘದ ಅಡಿ ಅಂಗನವಾಡಿ, ಆಶಾ, ಅಕ್ಷರ ದಾಸೋಹ, ಯೋಜನಾ ಕಾರ್ಮಿಕರು, ಸಂಘಟಿತ ಕಾರ್ಮಿಕರು, ಕೃಷಿ ತೋಟಗಾರಿಕೆ ರಬ್ಬರ್ ಟ್ಯಾಪಿಂಗ್ ಬೀಡಿ ಕಟ್ಟಡ ಇತರ ಎಲ್ಲ ರೀತಿಯ ಕಾರ್ಮಿಕರು, ಆಟೋರಿಕ್ಷಾ ಹೋಟೆಲ್ ರೆಸ್ಟೋರೆಂಟ್ ಆಸ್ಪತ್ರೆ ಆರೋಗ್ಯ ದೈನಂದಿನ ಕಾರ್ಮಿಕರು ಲೋಡಿಂಗ್ ಹೊರಗುತ್ತಿಗೆ ಕಾರ್ಮಿಕರು ಸೇರಿದಂತೆ ಎಲ್ಲ ಕ್ಷೇತ್ರದ ಕಾರ್ಮಿಕರ ಹಕ್ಕು ಮತ್ತು ಹಿತಾಸಕ್ತಿಗೆ ಒಗ್ಗಟ್ಟಾಗಿ 11 ರಾಷ್ಟ್ರೀಯ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಯಲಿದೆ.

ಕಾರ್ಮಿಕರಿಗೆ ವೇತನ ಸಾಮಾಜಿಕ ಭದ್ರತೆ ಪಿಂಚಣಿ ಉದ್ಯೋಗ ಭದ್ರತೆ ಗೌರವಯುತ ಜೀವನ ಹಾಗೂ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ಖಚಿತ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿ ಎಂ ಎಸ್ ಒತ್ತಾಯಿಸುತ್ತಿದೆ.

ಈ ಎಸ್ ಐ ಸಿ ವೇತನ ಮಿತಿಯನ್ನು 42,000 ಕ್ಕೆ ಹೆಚ್ಚಿಸಬೇಕು. ಇಪಿಎಸ್ 95 ಕನಿಷ್ಠ ಪಿಂಚಣಿಯನ್ನು ರೂ.7500 ಕ್ಕೆ ಹೆಚ್ಚಿಸಬೇಕು. ಇ ಪಿ ಎಫ್ ವೇತನವನ್ನು ಮೂವತ್ತು ಸಾವಿರಕ್ಕೆ ಹೆಚ್ಚಿಸಬೇಕು. ಬೋನಸ್ ಲೆಕ್ಕಾಚಾರದ ಮಿತಿಯನ್ನು 18000ಕ್ಕೆ ಹೆಚ್ಚಿಸಬೇಕು. ಬೋನಸ್ ಅರ್ಹತಾ ವೇತನ ಮಿತಿಯನ್ನು 42,000 ಕ್ಕೆ ಹೆಚ್ಚಿಸಬೇಕು. ಆಶಾ ಮತ್ತು ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವ ಧನವನ್ನು ಹೆಚ್ಚಿಸಬೇಕು.

ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಸಮಸಂಹಿತೆಗಳಲ್ಲಿ ಅಗತ್ಯ ತಿದ್ದುಪಡಿಯನ್ನು ಮಾಡಬೇಕು. ಗ್ರಾಚುಟಿ ಗರಿಷ್ಠ ಮಿತಿಯನ್ನು 40 ಲಕ್ಷಕ್ಕೆ ಹೆಚ್ಚಿಸಬೇಕು. ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ಮೂವತ್ತು ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಿದ್ದು ಕಾರ್ಮಿಕರಿಗೆ ಆರೋಗ್ಯ ರಕ್ಷಣೆ, ನಿವೃತ್ತಿ ಭದ್ರತೆ, ಸಾಮಾಜಿಕ ಉದ್ಯೋಗ ಮತ್ತು ಸುರಕ್ಷಿತ ಕೆಲಸದ ಭದ್ರತೆಯನ್ನು ಗೌರವಯುತ ಜೀವನದೊಂದಿಗೆ ನೀಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಬಿ ಎಂ ಎಸ್ ಒತ್ತಾಯಿಸುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿ ಎಂ ಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮನಿ ಹಳ್ಳ, ಗೀತಾ ಧರ್ಮರಾಜ್, ನಳಿನಿ ಅಡ್ಯಾರು, ಉದಯ್ ಕುಮಾರ್ ಬಿ ಸಿ, ಕುಮಾರ ಶೆಟ್ಟಿ ಕಲ್ಮಂಜ ಅವರು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್