ಕಾಸರಗೋಡು ಜಿಲ್ಲಾ ಕುಲಾಲ ಸಂಘ ದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

0
10

ಮಂಜೇಶ್ವರ :- ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಂಜೇಶ್ವರ ಕುಲಾಲ ಶಾಖೆಯ ನೇತೃತ್ವದಲ್ಲಿ ಆಗಸ್ಟ್ 15 ರಂದು ಜಿಲ್ಲಾ ಸಂಘದ ಪ್ರಧಾನ ಕಚೇರಿ ಮಹಾಕಾಳಿ ರಸ್ತೆ ತೂಮಿನಾಡು ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು .ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಮಂಜೇಶ್ವರ ಕುಲಾಲ ಶಾಖೆಯ ಅಧ್ಯಕ್ಷರಾದ ಗೋಪಾಲ ಸಾಲ್ಯಾನ್ ಕುಂಜತ್ತೂರು ವಹಿಸಿದ್ದು,ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ, ಉದ್ಯಮಿ ಸೋಮಪ್ಪ ಸಾಲ್ಯಾನ್ ಕುಂಜತ್ತೂರು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ಭಾಗವಹಿಸಿದರು. ಜಿಲ್ಲಾ ಸಂಫದ ಕಟ್ಟಡ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ದೀಕ್ಷಾ ಕುಂಜತ್ತೂರುಪದವು ,ಜಿಲ್ಲಾ ಸಂಘದ ಕೋಶಾಧಿಕಾರಿ ಈಶ್ವರ್ ಕುಲಾಲ್ ಕಣ್ವತೀರ್ಥ ಉಪಸ್ಥಿತರಿದ್ದರು.ಭಾಗವಹಿಸಿದ ಗಣ್ಯರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸ್ವಜಾತಿ ಬಾಂಧವರ ಸಹಕಾರದಲ್ಲಿ ಮಂಜೇಶ್ವರ ಶಾಖೆಯ ವತಿಯಿಂದ 2025- 26 ಸಾಲಿನ S.S.L.C ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕಗಳಿಸಿರುವ G.H.S ಕುಂಜತ್ತೂರು ಶಾಲೆಯ ವಿದ್ಯಾರ್ಥಿನಿ ಕುಮಾರಿ ಭುವಿ ಕುಲಾಲ್ ಗೆ ಪ್ರೋತ್ಸಾಹಕ ವಿದ್ಯಾನಿಧಿ ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಶಾಖೆಯ ಸದಸ್ಯರು, ದೇಶಾಭಿಮಾನಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಫದ ಸಂಘಟನಾ ಸಂಚಾಲಕರಾದ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ,ಮಂಜೇಶ್ವರ ಶಾಖೆಯ ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ಕಣ್ವತೀರ್ಥ ವಂದಿಸಿದರು.ಜಿಲ್ಲಾ ಸಂಘದ ಕೋಶಾಧಿಕಾರಿ ಈಶ್ವರ್ ಕುಲಾಲ್ ಕಣ್ವತೀರ್ಥಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ್ದ ಸರ್ವರಿಗೂ ಕಟ್ಟಡ ಸಮಿತಿ ಕಾರ್ಯದರ್ಶಿ ಜಗದೀಶ್ ಕಣ್ವತೀರ್ಥರವರ ನೇತೃತ್ವದಲ್ಲಿ ಸಿಹಿ ತಿಂಡಿ ಹಂಚಲಾಯಿತು.