ಕಳತ್ತೂರು: ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಶನಲ್ ಅಡಿಟೋರಿಯಂ ಹಾಗೂ ಚಾರಿಟೇಬಲ್ ಟ್ರಸ್ಟ್ (ರಿ.) ಕಳತ್ತೂರು ಇವರ ಆಶ್ರಯದಲ್ಲಿ ಸಾಧಕರ ಸನ್ಮಾನ ಹಾಗೂ ಕಳತ್ತೂರು ಆಸುಪಾಸಿನ ಶಾಲಾ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದ ಸುಮಾರು 19 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿವೇತನ ನೀಡಿ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಕಳತ್ತೂರಿನ ಸಮಾಜ ಸೇವಕ ಉಡುಪಿ ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಕಳತ್ತೂರು ದಿವಾಕರ ಬಿ. ಶೆಟ್ಟಿ ದಾಬ ನಿವಾಸ ಮಲ್ಲಾರು ಹಾಗೂ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ 11 ವರ್ಷದ ಪುಟ್ಟ ಬಾಲಕಿ ನಾಲ್ಕು ರಾಜ್ಯಗಳಲ್ಲಿ ಆರು ಭಾಷೆಗಳಲ್ಲಿ ಮತದಾನ ಜಾಗೃತಿ ಮೂಡಿಸಿದ ಕುಮಾರಿ ಸನ್ನಿಧಿ ಕಶೆಕೋಡಿ ಇವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಸಾಂದೀಪನಿ ಸಾಧನಾಶ್ರಮ, ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಕೇಮಾರು ಆಶೀರ್ವಚನ ಮಾಡಿ ಶಾಲಾ ಮಕ್ಕಳನ್ನು ಗೌರವಿಸುವುದು ಶ್ರೇಷ್ಠ ಕೆಲಸ ಅದಲ್ಲದೆ ಸಾಧಕರನ್ನು ಹುಡುಕಿ ಸನ್ಮಾನ ಮಾಡುವುದು ಇದು ಭಾರಿ ದೇವರ ದಯೆ ಇರುವ ಕಾರ್ಯವಾಗಿದೆ ಮಕ್ಕಳಿಗೆ ವಿದ್ಯಾಭ್ಯಾಸವೇ ಅವರ ಬಾಳಿಗೆ ಒಂದು ಆಧಾರ. ಇದಕ್ಕೆ ಪ್ರೋತ್ಸಾಹ ನೀಡುವ ಕಳತ್ತೂರು ಶೇಖರ ಶೆಟ್ಟಿಯವರಿಗೆ ದೇವರ ಸಹಾಯ ಖಂಡಿತ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ನಾನು ಸುಮಾರು 15 ವರ್ಷಗಳಿಂದ ಬಲ್ಲೆ, ಕುಶಲ ಶೇಖರ ಚಾರಿಟೇಬಲ್ ಟ್ರಸ್ಟಿನವರು ಪ್ರೋತ್ಸಾಹ ನೀಡಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿದ್ದು ಉತ್ತಮ ವ್ಯಕ್ತಿತ್ವವನ್ನು ಹೊಂದಿ ಸಮಾಜಕ್ಕೆ ಒಂದು ಮಾದರಿಯಾಗಿದ್ದಾರೆ. ಇದು ಶೇಖರ ಶೆಟ್ಟಿಯವರ ಮಹಾಸಾಧನೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಡಿಟೋರಿಯಂನ ಮಾಲಕರಾದ ಕಳತ್ತೂರು ಶೇಖರ ಬಿ. ಶೆಟ್ಟಿ ವಹಿಸಿದ್ದರು. ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಸಾಯಿರಾಧ ಗ್ರೂಪ್ ನ ಎಂ.ಡಿ. ಮನೋಹರ್ ಎಸ್. ಶೆಟ್ಟಿ, ಕಾಪು ಮಹಿಳಾ ಮಂಡಳಿ ಸಂಘದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಎಸ್. ಶೆಟ್ಟಿ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಹಿರಿಯ ನಿವೃತ್ತ ಅಧೀಕ್ಷಕ ನವೀನ್ ಚಂದರ್, ಕುತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ, ಉದ್ಯಮಿ ರವೀಂದ್ರ ಆಳ್ವ, ಅಂತರಾಷ್ಟ್ರೀಯ ಉದ್ಯಮಿ ಪ್ರದೀಪ್ ಶೆಟ್ಟಿ , ಶ್ರೀಮತಿ ಕುಶಲ ಶೇಖರ ಶೆಟ್ಟಿ, ಶ್ರೀಮತಿ ಕುಶಲ ಭುಜಂಗ ಶೆಟ್ಟಿ, ಶ್ರೀಮತಿ ಪ್ರೇಮ ಸುಂದರ ಶೆಟ್ಟಿ, ಶ್ರೀಮತಿ ಆನಂದಿ ವಾಸು ಶೆಟ್ಟಿ, ಅಮರನಾಥ ಶೆಟ್ಟಿ, ಶ್ರೀಮತಿ ನಯನ ಎಸ್. ಶೆಟ್ಟಿ, ಉಜ್ವಲ್ ಶೆಟ್ಟಿ, ರೋಶಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮತಿ ಚಾಂದಿನಿ ಉಜ್ವಲ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಸುಮನ ದೇವಾಡಿಗ ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಉದಯ ಕುಮಾರ್ ಧನ್ಯವಾದ ನೀಡಿದ ಈ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೆಸರಾಂತ ನೃತ್ಯ ತಂಡ ‘ಗ್ರ್ಯಾವಿಟಿ ಡಾನ್ಸ್ ಕ್ರೀವ್’ ಕಾಪು ಹಾಗೂ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರಗಿತು.

