ಬೆಳ್ಮಣ್ಣು: ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಶ್ರೀ ಬಿ.ಕೆ. ವಿಘ್ನೇಶ್ ಭಟ್ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಜರಗಲಿರುವ 26ನೇ ವರ್ಷದ ಸಂಘದ ವಾರ್ಷಿಕೋತ್ಸವ ಸಂಭ್ರಮ ಮತ್ತು 20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.
ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಬಿ.ಕೆ. ವಿಘ್ನೇಶ್ ಭಟ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸುರೇಶ ಅಬ್ಬನಡ್ಕ, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಸತೀಶ್ ಭಟ್, ಶ್ರೀ ಕ್ಷೇತ್ರದ ತಂತ್ರಿಗಳಾದ ಸತೀಶ್ ತಂತ್ರಿ ನಡಿಗುತ್ತು, ಕರುಣಾಕರ ಉಡುಪಿ, ನಂದಳಿಕೆ ಶ್ರೀ ಲಕ್ಷ್ಮಿ ಜನಾರ್ಧನ ಸತೀಶ್ ಶೆಟ್ಟಿ, ಬೆಳ್ಮಣ್ಣು ಶ್ರೀ ವನದುರ್ಗಾ ಜುವೆಲ್ಲರ್ಸ್ ನ ಮಾಲಕರಾದ ಜಯಂತ ಆಚಾರ್ಯ, ಬೆಳ್ಮಣ್ಣು ಶ್ರೀ ದುರ್ಗಾ ಇವೆಂಟ್ ಮಾಲಕರಾದ ಶರತ್ ರಾವ್, ಬೆಳ್ಮಣ್ಣು ಪೈ ಹೋಂ ಪ್ರೊಡಕ್ಟ್ ಮಾಲಕರಾದ ಸದಾಶಿವ ಪೈ, ಗೌರವ ಸದಸ್ಯರಾದ ಸದಾಶಿವ ಪುತ್ರನ್, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಸುವರ್ಣ ಕೆಮ್ಮಣ್ಣು, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಸದಸ್ಯರಾದ ಲೀಲಾ ಪೂಜಾರಿ, ಹರಿಣಿ ಪೂಜಾರಿ, ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ ವೀಣಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

