ನಿಟ್ಟೂರು ಭೀಕರ ಅಪಘಾತ : ಚಿಕಿತ್ಸೆ ಫಲಿಸದೆ ಯುವಕ ಸಾವು

0
53

ಉಡುಪಿ : ನಿಟ್ಟೂರು ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಗರ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾಗರದ ಜನ್ನತ್ ನಗರ ನಿವಾಸಿ ಬೆಟ್ಟೆ ಗಫಾರ್ ಅವರ ಪುತ್ರ ಬೆಟ್ಟೇ ಅಫ್ರಾನ್ (ವಯಸ್ಸು ತಿಳಿದುಬಂದಿಲ್ಲ) ಮೃತಪಟ್ಟ ದುರ್ದೈವಿ.

ನಿಟ್ಟೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಫ್ರಾನ್ ಅವರಿಗೆ ಗಂಭೀರ ಗಾಯಗಳಾಗಿತ್ತು. ಅಪಘಾತದ ಬಳಿಕ ಅವರನ್ನು ತಕ್ಷಣವೇ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಮೃತದೇಹದ ದಫನ್ ಕಾರ್ಯವು ನಾಳೆ ಉಡುಪಿಯ ತೋನ್ಸೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.