ಸಜೀಪ ಮೂಡ ಸರ್ಕಾರಿ ಪಿಯು ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಎಸ್. ಶ್ರೀಕಾಂತ್ ಶೆಟ್ಟರಿಂದ ಧ್ವಜಾರೋಹಣ

0
9

ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡ 80ನೆಯ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ ನೆರವೇರಿಸಿದರು .

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ ಸುಬ್ರಹ್ಮಣ್ಯ ಭಟ್ ಸ್ವಾತಂತ್ರ್ಯೋತ್ಸವದ ದಿನದ ಮಹತ್ವವನ್ನು ವಿವರಿಸಿದರು ಕಾಲೇಜು ಪ್ರಾಂಶುಪಾ ಲೆ ಡಾ ಜೈ ರಾಬಿ ಸ್ವಾತಂತ್ರ ಇತಿಹಾಸವನ್ನು ಮಕ್ಕಳಿಗೆ ವಿವರಿಸಿದ್ದರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಶ್ವನಾಥ ಕೊಟ್ಟಾರಿ, ನಿತಿನ್ ಅರಸ ಶುಭ ಹಾರೈಸಿದರುಉಪನ್ಯಾಸಕಿ ಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕಿ ಸುಂದರಿ ಸ್ವಾಗತಿಸಿದರು ಉಪನ್ಯಾಸಕ ಬಾಲಕೃಷ್ಣ ಎನ್,ವಿ, ಉಪನ್ಯಾಸಕಿ ಶೋಭಾ, ಗಾಯತ್ರಿ, ಉಪನ್ಯಾಸಕ ಸುರೇಶ್ ಐತಾಳ ,ಬಾಲಕೃಷ್ಣ ನಾಯಕ್ ,ಸಿಬ್ಬಂದಿಗಳಾದ ಸಂಜೀವ, ಲತಾ, ಉಪಸ್ಥಿತರಿದ್ದರು