70 ದಿನಗಳ ಯೋಗಾಭ್ಯಾಸಕ್ಕೆ ತೆರೆ: ಅಳದಂಗಡಿಯಲ್ಲಿ ಮಾತೃ ಪೂಜನ ಕಾರ್ಯಕ್ರಮ

0
23

ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಶ್ರೀ ನಮನ ಸಭಾಭಾವನ ಶಾಖೆಯಲ್ಲಿ 70 ದಿವಸಗಳ ಯೋಗಶಿಕ್ಷಣವು ಪೂರ್ಣಗೊಂಡು, ಮಾತೃ ಪೂಜನ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮವು ಜಿಲ್ಲಾ ಸಮಿತಿಯ ಸಹಯೋಗದಲ್ಲಿ ನಡೆಯಿತು.

ಶಾಖೆಯ ಯೋಗ ಬಂಧುಗಳ ಭಕ್ತಿ ಭಾವದಿಂದ ಕೂಡಿದ ಭಜನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕುಮಾರಿ ನಿರೀಕ್ಷಾರವರ ಸುಸ್ಪಷ್ಟವಾದ ನಿರೂಪಣೆ ,ಶ್ರೀಮತಿ ಪುಷ್ಪಾ ಅವರ ಸುಶ್ರಾವ್ಯವಾದ ಪ್ರಾರ್ಥನೆ, ಮಾಲಾರವರ ಆದರದ ಸ್ವಾಗತ ಅತ್ಯುತ್ತಮವಾಗಿತ್ತು.

ನಂತರ ಶ್ರೀ ನಮನ ಸಭಾಭವನ ಶಾಖೆಯ 70 ದಿನಗಳ ವರದಿಯನ್ನು ಭಾರತಿ ಕಾಪಿನಡ್ಕ ಇವರು ಅಚ್ಚುಕಟ್ಟಾಗಿ ವಾಚಿಸಿದರು. ಶಾಖೆಯ ಯೋಗಬಂಧುಗಳಾದ ಬೇಬಿ ಪಿಲ್ಯ,ಶ್ರೀಯುತ ಜಗದೀಶ್ , ನಾಗಭೂಷಣ್,ಪ್ರಸಾದ್ , ಗಿರೀಶ್, ಸುಜಾತ,ರಶ್ಮಿ,ಪ್ರಸನ್ನ, ಉಷಾನವರು ಯೋಗಾಭ್ಯಾಸದಿಂದ ತಮಗಾದ ಅನುಭವಗಳನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಳದಂಗಡಿಯ ಜನಪ್ರಿಯ ವೈದ್ಯರಾದ ಸುಷ್ಮಾ ಡೋಂಗ್ರೆ ರವರು ಅಮ್ಮನ ಕರ್ತವ್ಯ, ಅಮ್ಮನನ್ನು ಸಮ್ಮಾನ ಮಾಡಬೇಕಾದ ನಮ್ಮ ಕರ್ತವ್ಯಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶುಭಾ, ಸಂಚಾರಿ ಶಿಕ್ಷಕರು, ಪುತ್ತೂರು, ಇವರು ಸಮಿತಿಯ ಪರಿಚಯದೊಂದಿಗೆ ಅಮ್ಮನ ಪ್ರಾಮುಖ್ಯತೆಗಳನ್ನು ಮನಮುಟ್ಟುವಂತೆ ತಿಳಿಸಿದರು. ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಬೆಳ್ತಂಗಡಿ ಶಾಖೆಯ ಶಿಕ್ಷಕರಾದ ಗೀತಾ ರವರು ಸಮಿತಿಯಲ್ಲಿ ಮಾತೃಪೂಜನ ಕಾರ್ಯಕ್ರಮವನ್ನು ಆಚರಿಸುವ ಉದ್ದೇಶವನ್ನು ಅರ್ಥಪೂರ್ಣವಾಗಿ ತಿಳಿಸಿದರು.

ನಂತರ ಹರಿಣಾಕ್ಷಿ ಇವರು ಈ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು. ನೇತ್ರಾವತಿ ವಲಯ ಸಂಯೋಜಕರಾದ ಜಯರಾಮ,ಪುತ್ತೂರು ತಾಲೂಕು ಶಿಕ್ಷಣ ಪ್ರಮುಖರಾದ ಸತೀಶ್ ಹಾಗೂ ವಿನಯ ರವರು ಯೋಗಬಂಧುಗಳಿಗೆ ಆಟಗಳನ್ನು ಆಡಿಸುವ ಮೂಲಕ ಅವರನ್ನು ಹುರಿದುಂಬಿಸಿದರು.

ಅಳದಂಗಡಿಯ ಶ್ರೀ ನಮನ ಸಭಾಭವನ ಶಾಖೆಯ ಯೋಗಬಂಧುಗಳು ತಯಾರಿಸಿದ ಶುಚಿ-ರುಚಿಯಾದ ಪ್ರಸಾದವನ್ನು ಅನ್ನಪೂರ್ಣೇಶ್ವರಿ ಮಂತ್ರ ಪಠಣದ ನಂತರ ಎಲ್ಲರಿಗೂ ಕೈತುತ್ತು ನೀಡಿ ಹಂಚಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಮಾತೃಶಾಖೆಯಾದ ಬೆಳ್ತಂಗಡಿ ಶಾಖೆಯ ಯೋಗಬಂಧುಗಳು ಸರ್ವ ಸಹಕಾರವನ್ನು ನೀಡಿದರು.
ನಮನ ಸಭಾಭವನದ ಮಾಲಕರಾದ ಸತೀಶ್ ರವರು ಉಪಸ್ಥಿತರಿದ್ದರು.