ಪ್ರೇರಣಾ ಶಾಲೆಯಲ್ಲಿ ಭಾರತದ 80 ನೇ ಸ್ವಾತಂತ್ರ್ಯೋತ್ಸವ ಆಚರಣೆ

0
8

ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಭಾರತದ 80 ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು . ವಂದೇ ಮಾತರಂ ಗೀತೆ ಹಾಡಿದ ನಂತರ ಮೂಡುಬಿದಿರೆಯ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಬಾಲಕೃಷ್ಣ ಭಟ್ ರವರು ಧ್ವಜಾರೋಹಣ ಮಾಡಿ , ಧ್ವಜಕ್ಕೆ ಗೌರವ ಸಲ್ಲಿಸಿದರು . ವಿದ್ಯಾರ್ಥಿಗಳಿಂದ ಘೋಷ್ ಸಹಿತ ವಿವಿಧ ವ್ಯಾಯಾಮ , ರಾಷ್ಟ್ರಗೀತೆ ಹಾಡಲಾಯಿತು.

ನಂತರ ದೀಪ ಪ್ರಜ್ವಲನೆಯ ಮೂಲಕ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಾ , ಸ್ವತಂತ್ರ ಅಂದರೆ , ತನ್ನ ಕೆಲಸವನ್ನು ತಾನೇ ಮಾಡುವುದು ಎಂಬ ಅರ್ಥ .ಶ್ರೀಕೃಷ್ಣನು ಭಗವದ್ಗೀತೆಯಲ್ಲಿ , ನಿನ್ನ ಉದ್ಧಾರಕ್ಕೆ ನೀನೇ ಪರಿಶ್ರಮ ಪಡಬೇಕು ಎಂದು ಹೇಳಿದುದರ ಅರ್ಥವೂ ಇದೇ ಆಗಿದೆ . ಬೇರೆಯವರನ್ನು ಕೀಳಾಗಿ ಬೈಯುವುದು , ಸಕಾರಣವಲ್ಲದ ಪ್ರತಿಭಟನೆ ಮಾಡುವುದು ಸ್ವಾತಂತ್ರ್ಯವಲ್ಲ . ರಾಷ್ಟ್ರಭಕ್ತಿಯು ನಮ್ಮೆಲ್ಲರ ಆದ್ಯತೆಯಾಗಬೇಕು ” ಎಂದು ನುಡಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೇರಣಾ ಶಾಲೆಯ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು , ” ಭಾರತದ ಸಂಬಾರ ಪದಾರ್ಥಗಳ ಆಕರ್ಷಣೆ ಹೊಂದಿ , ತಕ್ಕಡಿ ಹಾಗೂ ತೂಕದ ಕಲ್ಲು ಹಿಡಿದು ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು , ಭಾರತೀಯ ರಾಜರುಗಳಲ್ಲಿ ಒಗ್ಗಟ್ಟು ಇಲ್ಲದುದರ ಲಾಭ ಪಡೆದು , ಭಾರತದ ಆಳ್ವಿಕೆಯನ್ನು ತಮ್ಮ ವಶಕ್ಕೆ ಪಡೆದರು . ಗಾಂಧೀಜಿ , ನೆಹರೂ , ಪಟೇಲ್ , ಸುಭಾಷ್ ಚಂದ್ರ ಬೋಸ್ , ಗೋಖಲೆ , ಕ್ರಾಂತಿ ವೀರರಾದ ಖುದಿರಾಮ ಬೋಸ್ , ಭಗತ್ ಸಿಂಗ್ , ಅಜಾದ್ ರಂತಹ ಲಕ್ಷಾಂತರ ದೇಶಭಕ್ತರ ಹೋರಾಟ ಹಾಗೂ ಬಲಿದಾನದ ಮೂಲಕ , ನಾವು ನಮ್ಮ ದೇಶವನ್ನು ಮರಳಿ ಪಡೆದೆವು ” ಎಂದು ನುಡಿದರು . ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ರವರು ಅತಿಥಿಗಳನ್ನು ಸ್ವಾಗತಿಸಿದರು .

ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ( ರಿ ) ಮೂಡುಬಿದಿರೆಯ ಅಧ್ಯಕ್ಷರಾದ ರಾಜೇಶ್ ಬಂಗೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು . ಶಾಲಾ ಶಿಕ್ಷಕಿ ಕು.ಮಯೂರಿ ಕಾರ್ಯಕ್ರಮ ನಿರೂಪಣೆ ಮಾಡಿದರು . ಶಿಕ್ಷಕಿ ಶಶಿಕಲಾರವರು ಧನ್ಯವಾದ ಸಲ್ಲಿಸಿದರು . ಟ್ರಸ್ಟ್ ನ ಕೋಶಾಧಿಕಾರಿ ಎಸ್.ಎನ್.ಬೋರ್ಕರ್ , ಸದಸ್ಯರಾದ ಮಂಜುನಾಥ ಶೆಟ್ಟಿ , ಡಾ.ಆನಂದ ಕಾರ್ಲ , ಎಲ್ಲಾ ಶಿಕ್ಷಕ – ಶಿಕ್ಷಕಿಯರು , ಶಿಕ್ಷಕೇತರ ಸಿಬ್ಬಂದಿಗಳು , ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು .