ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಂಗಾರಕಟ್ಟೆ -ಸಾಸ್ತಾನ ರೋಟರಿ ಕ್ಲಬ್ಬಿನ ಅಧ್ಯಕ್ಷರು, ರೊ. ಕುಸುಮ ಮನೋಜ್ ರವರು ಧ್ವಜಾರೋಹಣಗೈದರು. ಸ್ವಾತಂತ್ರೋತ್ಸವ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಕಲ್ಪನಾ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ. ಬಿ. ಭರತ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ತಾರನಾಥ ಶೆಟ್ಟಿ, ಚೇರ್ಮನ್ ಫಾರ್ಚುನ್ ಕಾಲೇಜ್, ಶ್ರೀ ವಿಘ್ನೇಶ್ವರ ಅಡಿಗ, ಶ್ರೀ ಜೇಮ್ಸ್ ರೋಡ್ರಿಗಸ್, ಸ್ಮಿತಾ ಮೋಲ್, ಶ್ರೀಮತಿ ಸುಜಾತಾ ಟಿ .ಶೆಟ್ಟಿ, ರೊ. ಲೀಲಾವತಿ, ರೊ. ಮನೋಜ್ ಕುಮಾರ್, ಫಾರ್ಚುನ್ ಕಾಲೇಜ್ ಆಫ್ ಹೆಲ್ತ್ ಸೈನ್ಸ್ ನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕೇತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀ ಚಂದ್ರ ಸ್ವಾತಂತ್ರ್ಯದ ಮಹತ್ವದ ಕುರಿತು ಮಾತನಾಡಿದರು.
ಹರ್ಷವರ್ಧನ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಮಾಡಿದರು. ಐರೋಡಿ ಗ್ರಾಮ ಪಂಚಾಯತ್, ಐರೋಡಿ ಹಾಗೂ ಹಂಗಾರಕಟ್ಟೆ – ಸಾಸ್ತಾನ ರೋಟರಿ ಕ್ಲಬ್ಬಿನ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

