ಗ್ಯಾರೇಜ್ ಮಾಲಕರ ಸಂಘ ( ದ. ಕ – ಉಡುಪಿ). ಕಾರ್ಕಳ ವಲಯ. ಇದರ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೈಲೂರಿನ “ಹೊಸ ಬೆಳಕು ಆಶ್ರಮ”ಕ್ಕೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರಾದ “ತನುಲಾ” ಇವರಿಗೆ ಗ್ಯಾರೇಜ್ ಮಾಲಕರ ಸಂಘದ ಪರವಾಗಿ ದಿನನಿತ್ಯದ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ವಲಯ ಅಧ್ಯಕ್ಷರು ಶಂಕರ್ ಶೆಟ್ಟಿಗಾರ್ ಕಾರ್ಯದರ್ಶಿ ನಾಗೇಂದ್ರ ಶೆಟ್ಟಿ ಗಾರ್ ಹಾಗೂ ಗೌರವಾಧ್ಯಕ್ಷರಾದ ಅಬ್ದುಲ್ ಮೊಯಿದ್ದೀನ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

