
ಆರೂರು ಅಡ್ಜಿಲು ಭಾಗಕ್ಕೆ ಹೊಸ ಟಿಸಿ ಅಳವಡಿಕೆ ಮಾಡಿಕೊಡಬೇಕು ಎಂಬುದಾಗಿ ಒಂದು ತಿಂಗಳ ಹಿಂದೆ ತುಳುನಾಡ ರಕ್ಷಣಾ ವೇದಿಕೆ , ಉಡುಪಿ ಜಿಲ್ಲೆ,ಬ್ರಹ್ಮಾವರ ತಾಲೂಕು ಘಟಕದಿಂದ ಈ ಬಗ್ಗೆ ಮೆಸ್ಕಾಂ ಬ್ರಹ್ಮಾವರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಇಂದು ಆರೂರು ಗ್ರಾಮದ ಅಡ್ಜಿಲು ಭಾಗದ ವಿದ್ಯುತ್ ಸರಬರಾಜಿನ ಸಮಸ್ಯೆಯ ಕುರಿತಾಗಿ ಶೀಘ್ರವಾಗಿ ಸ್ಪಂದಿಸಿ ಇಂದು ಸ್ಥಳ ಭೇಟಿ ನೀಡಿ ಪರಿಶೀಲಿಸಿದರು.
ತುಳುನಾಡ ರಕ್ಷಣಾ ವೇದಿಕೆ ( ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಫ್ರ್ಯಾoಕಿ ಡಿಸೋಜ ಇವರ ಸಲಹೆ ಸೂಚನೆಯಂತೆ ನಾವು ಬ್ರಹ್ಮಾವರ ತಾಲೂಕು ಘಟಕ ನೀಡಿರುವ ಮನವಿಗೆ ಸ್ಪಂದಿಸಿ ಇಂದು ಸತೀಶ್ ಸರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಯ ಮತ್ತು ಪಾಲನಾ ವಿಭಾಗ ಮೆಸ್ಕಾಂ ಬ್ರಹ್ಮಾವರ, ಖುದ್ದಾಗಿ ಸ್ಥಳ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಆರೂರು ಅಡ್ಜಿಲು ಗ್ರಾಮಕ್ಕೆ 100,ರಿಂದ 150 ಮನೆಗಳು ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ಹೊಸ ಟಿಸಿ ಶೀಘ್ರದಲ್ಲಿ ಹಾಕಿ ಕೊಡಿಸುವುದಾಗಿ ತಿಳಿಸಿದರು.
ವಿದ್ಯುತ್ ಸರಬರಾಜಿನಲ್ಲಿ ಆಗುವಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾಗಿರುವ ಫ್ರ್ಯಾಂಕಿ ಡಿಸೋಜ ಅವರು ಮಾತನಾಡಿ ಮೂರು ವರ್ಷಗಳಿಂದ ಈ ಸಮಸ್ಯೆ ಇದೇ ರೀತಿ ಮುಂದುವರಿದು ಈ ಭಾಗಕ್ಕೆ ಹೆಚ್ಚುವರಿ ಟಿಸಿ ಬೇಕು, ಶೀಘ್ರವಾಗಿ ಈ ಕಾರ್ಯವನ್ನು ಮಾಡಿಕೊಡಬೇಕು, ಮನವಿಗೆ ಸ್ಪಂದಿಸಿ ಅಧಿಕಾರಿಗಳು ಬಂದಿರುವುದು ಖುಷಿ, ಅದೇ ರೀತಿ ಒಂದು ತಿಂಗಳ ಒಳಗಾಗಿ ಹೊಸ ಟಿಸಿ ಅಳವಡಿಕೆ ಆಗಬೇಕು, ಹಾಗೆಯೇ ಇಲ್ಲಿನ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಕೂಡಲೇ ಕಾರ್ಯಪ್ರವರ್ತ ರಾಗಬೇಕು ಇಲ್ಲವಾದಲ್ಲಿ ಮೆಸ್ಕಾಮಿನ ಮುಂದೆ ಇನ್ನು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿರುವ ಸುರೇಂದ್ರ ಪೂಜಾರಿ ಅವರು ಮಾತನಾಡಿ ಗ್ರಾಮಸ್ಥರ ಪರವಾಗಿ ತುಳುನಾಡ ರಕ್ಷಣಾ ವೇದಿಕೆ ಪರವಾಗಿ ಈ ಗ್ರಾಮಕ್ಕೆ ಸಂಬಂಧಪಟ್ಟ ವಿದ್ಯುತ್ ಸಮಸ್ಯೆಯ ಕುರಿತು ಶೀಘ್ರವಾಗಿ ಸ್ಪಂದಿಸಿ ಮೆಸ್ಕಾಂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಇದಕ್ಕೆ ಗ್ರಾಮಸ್ಥರ ಸಹಕಾರ ಇದೆ ಎನ್ನುವುದಾಗಿ ತಿಳಿಸಿದರು.
ಹಾಗೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿರುವ ಶರತ್ ರಾಜ್ ಆರೂರು ಮಾತನಾಡಿ ಆರೂರು ಅಡ್ಜಿಲು ಗ್ರಾಮಕ್ಕೆ ಹೆಚ್ಚುವರಿ ಒಂದು ಟಿ ಸಿ ಅಗತ್ಯವಿದೆ, ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಂದರೆಯಾಗುತ್ತಿದ್ದು ಹಾಗೆ ಇಲ್ಲಿ ಹಲವಾರು ಕೃಷಿ ಕೂಲಿಕಾರ್ಮಿಕರು ಇರುವುದರಿಂದ ಈ ಕರೆಂಟಿನ ಅವಶ್ಯಕತೆ ಅತ್ಯಗತ್ಯ, ಪದೇ ಪದೇ ಹೋಗುತ್ತಿರುವ ಈ ಸಮಸ್ಯೆಗೆ ಪರಿಹಾರ ಸೂಚಿಸಿ, ಹೊಸ ಟಿಸಿ ಅಳವಡಿಸಿಕೊಡಿ ಅನ್ನುದಾಗಿ ತಿಳಿಸಿದರು, ಹಾಗೆಯೇ ಈ ಜಿಲ್ಲಾ ಉಪಾಧ್ಯಕ್ಷರಾಗಿರುವ ಮನೋಜ ಸರ್, ಹಾಗೆ ಈ ಸಂದರ್ಭ ಮೆಸ್ಕಾಂ ಅಧಿಕಾರಿ ಮಲ್ಲಿಕಾರ್ಜುನ್ ಸರ್ ಕೂಡ ಜೊತೆಗಿದ್ದರು, ಹಾಗೆ ಬ್ರಹ್ಮಾವರ ತಾಲೂಕು ಸಂಘಟನೆಯ ಗೌರವ ಅಧ್ಯಕ್ಷರಾಗಿರುವ ಪ್ರದೀಪ್ ದೀಪು ಚಾoತರ್ , ಸದಸ್ಯರಾಗಿರುವ, ವಿಜಯ್ ಆರೂರು, ರಾಕೇಶ್ ಆರೂರು, ರವಿ ಆರೂರು , ರಮೇಶ್ ಉಡುಪಿ , ಗೋಪಾಲ್ ತೆಂಕಬೆಟ್ಟು, ದಿನೇಶ್ ಆಚಾರ್ಯ ಜೊತೆಗಿದ್ದರು, ಹಾಗೆ ಆರೂರು ಅಡ್ಜಿಲು ಭಾಗದ ಗ್ರಾಮಸ್ಥರಾಗಿರುವ ಹಿರಿಯರಾಗಿರುವ ರಾಮ ಪೂಜಾರಿ ಇವರು ಮಾತನಾಡಿದರು.
ಹಾಗೆ ಈ ಸಂದರ್ಭ ಗ್ರಾಮದ ಹಿರಿಯರು, ಮಹಾಲಿಂಗೇಶ್ವರ ಯುವಕ ಮಂಡಲದ ಯುವಕರು ಗ್ರಾಮದ ಹಲವರು ಮಹಿಳೆಯರು ಉಪಸ್ಥಿತರಿದ್ದರು, ಮಹಿಳೆಯರಾದ ಯಶೋಧ, ಪೂರ್ಣಿಮಾ, ಶೋಭಾ, ರಜನಿ, ಸುರೇಖಾ ಇವರು ಮಾತನಾಡಿ ವಿದ್ಯುತ್ತ ಸಮಸ್ಯೆ ಶೀಘ್ರವಾಗಿ ಪರಿಹಾರವಾಗಬೇಕು, ನಾವು ದನ ಕರೆಯುವುದು, ಕೂಲಿ ಕೃಷಿ ಕಾರ್ಮಿಕರಾಗಿರುವುದರಿಂದ ಇಂದಿನ ದಿನ ಪ್ರತಿಯೊಂದು ಕರೆಂಟಿನಿಂದಲೇ ಆದುದರಿಂದ ಇದು ತುಂಬಾ ಅತ್ಯಗತ್ಯ, ಆರೂರು ಅಡ್ಜಿಲು ಭಾಗಕ್ಕೆ ಹೊಸ ಟಿಸಿ ಅಳವಡಿಸಿಕೊಡಿ, ಕರೆಂಟಿನ ಸಮಸ್ಯೆಯಿಂದ ಮುಕ್ತಿ ಕೊಡಿ ಎನ್ನುವುದಾಗಿ ತಿಳಿಸಿದರು, ಈ ಸಂದರ್ಭ ಊರಿನ ಗ್ರಾಮದ ಹಿರಿಯರು ಮಹಿಳೆಯರು ಪ್ರತಿಯೊಬ್ಬರೂ ಕೂಡ ಈ ಸಮಸ್ಯೆ ಕುರಿತಾಗಿ ಧ್ವನಿ ಎತ್ತಿದರು.
50ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಒಂದಾಗಿ ಅಧಿಕಾರಿಗಳಲ್ಲಿ ತುಳುನಾಡ ರಕ್ಷಣೆ ವೇದಿಕೆಯ ಜೊತೆಯಲ್ಲಿ ಸಮಸ್ಯೆಯ ಕುರಿತು ಶೀಘ್ರವಾಗಿ ಹೊಸ ಟಿಸಿ ಅಳವಡಿಕೆ ಆಗಬೇಕು, ಈ ವಿದ್ಯುತ್ ನ ಸಮಸ್ಯೆಗೊಂದು ಮುಕ್ತಿ ಸಿಗಬೇಕು ಈ ಕಾರ್ಯ ಶೀಘ್ರವಾಗಿ ನಡೆಯಬೇಕೆಂದು ತಿಳಿಸಿದರು. ಹಾಗೆ ಈ ಸಂದರ್ಭ ಮಾಧ್ಯಮ ಮಿತ್ರರು ನಮ್ಮ ಜೊತೆಗಿದ್ದು ಈ ಸಮಸ್ಯೆಗೆ ಸ್ಪಂದಿಸಿ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಈ ಸಮಸ್ಯೆ ಕುರಿತಾಗಿ ಮಾಹಿತಿ ನೀಡುವಲ್ಲಿ ಸಹಕರಿಸಿದರು.
