ರಾಮನಗರ : ಕರ್ನಾಟಕ ಜಾನಪದ ಪರಿಷತ್ತು ಹಾಗೂ ಯುನೆಸ್ಕೋ ಮಾನ್ಯತೆ ಪಡೆದ ‘ಜಾನಪದ ಲೋಕ’ದ ಸಂಯುಕ್ತ ಆಶ್ರಯದಲ್ಲಿ (ಆಗಸ್ಟ್ 22, 2026), ಶನಿವಾರದಂದು ‘ವಿಶ್ವ ಜಾನಪದ ದಿನಾಚರಣೆ 2026’ ಹಾಗೂ ‘ಜಾನಪದ ಕಲಾವಿದರೊಡನೆ ಒಂದು ಸಂವಾದ’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು – ಮೈಸೂರು ರಾಜ್ಯ ಹೆದ್ದಾರಿಯ ರಾಮನಗರ ಸಮೀಪದ ದೊಡ್ಡಮಣ್ಣು ಗುಡ್ಡೆ ಬಳಿ ಇರುವ ಜಾನಪದ ಲೋಕದಲ್ಲಿ ಬೆಳಿಗ್ಗೆ 10:30 ಗಂಟೆಗೆ ಈ ಕಾರ್ಯಕ್ರಮ ಜರುಗಲಿದೆ.
ಬೆಂಗಳೂರಿನ ಬಿ.ಎಂ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ .ಚಿ . ಬೋರಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಅವರು ಗೌರವಾನ್ವಿತ ಉಪಸ್ಥಿತರವಿರಲಿದ್ದಾರೆ.
ಗೌರವಾರ್ಪಣೆ ಹಾಗೂ ಗಾಯನ:-
ಹಿರಿಯ ಜಾನಪದ ಗಾಯಕರಾದ ಡಾ. ಮಳವಳ್ಳಿ ಮಹಾದೇವಸ್ವಾಮಿ ಅವರಿಗೆ ವಿಶೇಷ ಗೌರವಾರ್ಪಣೆ ಹಾಗೂ ಜಾನಪದ ಗಾಯನ ಕಾರ್ಯಕ್ರಮ ಜರುಗಲಿದೆ.
ಕಲಾಪ್ರದರ್ಶನ:-
ನಾಡೋಜ ಹೆಚ್.ಎಲ್. ನಾಗೇಗೌಡ ಕಲಾಶಾಲೆಯ ಡಿಪ್ಲೋಮಾ ವಿದ್ಯಾರ್ಥಿಗಳಿಂದ ವಿಶೇಷ ಕಲಾಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಸಾಂಸ್ಕೃತಿಕ ಉತ್ಸವಕ್ಕೆ ಸಾರ್ವಜನಿಕರು ಹಾಗೂ ಜಾನಪದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಕೋರಿದ್ದಾರೆ.

