
ರಾಮನಗರ : ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ರಾಮನಗರದ ಜಾನಪದ ಲೋಕದಲ್ಲಿ 2026-27ನೇ ಸಾಲಿನ ಜನಪದ ಪ್ರದರ್ಶಕ ಕಲೆಗಳ ಸ್ನಾತಕೋತ್ತರ ಕೋರ್ಸ್‌ಗೆ (ಎಂಪಿಎ) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಈ ಕೋರ್ಸ್ ಅನ್ನು ಆರಂಭಿಸಲಾಗಿದೆ.
ಕೋರ್ಸ್ ಹೆಸರು:- ಜನಪದ ಪ್ರದರ್ಶಕ ಕಲೆಗಳ ಸ್ನಾತಕೋತ್ತರ ಕೋರ್ಸ್ (ಎಂಪಿಎ).
ಕೋರ್ಸ್ ಅವಧಿ:- ಎರಡು ವರ್ಷಗಳು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-ಆ. 31ರೊಳಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸಬೇಕು.
ಸಂಪರ್ಕ ಮತ್ತು ಹೆಚ್ಚಿನ ಮಾಹಿತಿಗಾಗಿ
ಸಂಯೋಜಕರು: ಸಂದೀಪ್ ಕೆ.ಎಸ್., ಕರ್ನಾಟಕ ಜಾನಪದ ಪರಿಷತ್ತು.
ವಿಳಾಸ: ನಾಡೋಜ ಎಚ್.ಎಲ್.ನಾಗೇಗೌಡ ಸಂಶೋಧನಾ ಕೇಂದ್ರ, ಜಾನಪದ ಲೋಕ, ಬೆಂಗಳೂರು-ಮೈಸೂರು ಹೆದ್ದಾರಿ, ಐಜೂರು ಅಂಚೆ, ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆ – 562159.
ಮೊಬೈಲ್ ಸಂಖ್ಯೆ: 9844673191
