ಕರಾಟೆ ಸ್ಪರ್ಧೆ : ಕಾಂತಾವರದ ಆಯುಷ್ ಕುಲಾಲ್ ದ್ವಿತೀಯ

0
36

ಕಾರ್ಕಳ : ಪ್ರಕೃತಿ ನ್ಯಾಷನಲ್ ಸ್ಕೂಲ್ ನ ಆರನೇ ತರಗತಿಯ ವಿದ್ಯಾರ್ಥಿಯಾದ ಆಯುಷ್ ಕುಲಾಲ್ ,16/08/2026 ರಂದು Thunder’s Grand Bay, ಸುಭಾಷ್ ನಗರ, ಕುರ್ಕಾಲ್,ಕಟಪಾಡಿಯಲ್ಲಿ ನಡೆದ 11 ವರ್ಷದ ಬಾಲಕರ ನ್ಯಾಷನಲ್ ಲೆವೆಲ್ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ಕುಮಿಟೆ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾನೆ.

ಇವರು ಮೃನಲಿ ಶೆಟ್ಟಿಯವರಿಂದ ತರಬೇತಿ ಯನ್ನು ಪಡೆದಿರುತ್ತಾರೆ. ಇವರು ಕಾಂತಾವರ ಗ್ರಾಮದ ಬಾರಡಿಯ ಜಗದೀಶ್ ಕುಲಾಲ್ ಮತ್ತು ಜ್ಯೋತಿ ಕುಲಾಲ್ ಇವರ ಪುತ್ರನಾಗಿರುತ್ತಾನೆ.