ಮೂಡುಬಿದಿರೆ : ಇಲ್ಲಿನ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ವತಿಯಿಂದ ಅಲಂಗಾರು ಬಸವನಕಜೆ ಪ್ರಯಾಣಿಕರ ತಂಗುದಾಣದ ಬಳಿ ನಿರ್ಮಿಸಲಾದ ನೂತನ ಸೋಲಾರ್ ದಾರಿ ದೀಪವನ್ನು ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ, ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತದ ಅಧ್ಯಕ್ಷ ಸಹಕಾರಿ ರತ್ನ ಬೆಳುವಾಯಿ ಭಾಸ್ಕರ್ ಕೋಟ್ಯಾನ್ ಉದ್ಘಾಟಿಸಿದರು.ದಾರಿದೀಪದ ಅಗತ್ಯತೆಯನ್ನು ಸಹಕಾರಿ ಸಂಘಕ್ಕೆ ಮನವರಿಕೆ ಮಾಡಿ ಮುತುವರ್ಜಿ ವಹಿಸಿದ ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ದಯಾನಂದ ಪೈಯವರನ್ನು ಭಾಸ್ಕರ್ ಕೋಟ್ಯಾನ್ ರವರು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ ದಯಾನಂದ ಪೈಯವರು ಈ ಪರಿಸರದಲ್ಲಿ ದಾರಿದೀಪದ ಕೊರತೆ ಇದ್ದಾಗ ತಾವು ನೀಡಿದ ಮನವಿಯ ಬಗ್ಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಕ್ರತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಪಾಂಡುರಂಗ,ಮತ್ತು ರಾಮಪ್ರಸಾದ್, ಪಡುಮಾರ್ನಾಡು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬೇoಗೂರಿ ಬಾಲಕೃಷ್ಣ ಶೆಟ್ಟಿ,ಪಡುಮಾರ್ನಾಡು ಜನತಾ ಕೋ ಓಪರೆಟಿವ್ ವಿವಿದುದ್ದೇಶ ಸಹಕಾರಿ ನಿರ್ದೇಶಕರುಗಳಾದ ಎಂ ರಾಘವೇಂದ್ರ ಭಂಡಾರ್ಕರ್ ಮತ್ತು ಕಿಶೋರ್ ಭಂಡಾರಿ, ಅಮೃತ ಸಾವಯವ ಕೃಷಿಕರ ಸಂಘದ ಅಶೋಕ್ ಭಂಡಾರಿ,ಸಿವಿಲ್ ಕಾಂಟ್ರಾಕ್ಟರ್ ಗಣೇಶ್ ಶೆಟ್ಟಿ, ಉದ್ಯಮಿ ಉಮೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪಡುಮಾರ್ನಾಡು ದಯಾನಂದ ಪೈಯವರು ಪ್ರಾಸ್ಥಾವಿಕವಾಗಿ ಮತನಾಡಿ ಸ್ವಾಗತಿಸಿದರು. ನಿರ್ದೇಶಕ ಪಾಂಡುರಂಗ ವಂದಿಸಿದರು.

