ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ವತಿಯಿಂದ ಒಡಿಯೂರು ಕ್ಷೇತ್ರಕ್ಕೆ ಪಾದಯಾತ್ರೆ

0
93

ಬಂಟ್ವಾಳ : ದಿನಾಂಕ 23-08-2026 ರಂದು ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು ಇದರ ವತಿಯಿಂದ ಸೆರ್ಕಳದ ಶ್ರೀ ಮಹಮ್ಮಾಯಿ ದೇವಸ್ಥಾನದಿಂದ ಲೋಕ ಕಲ್ಯಾಣಾರ್ಥಕ್ಕಾಗಿ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ಪ್ರಥಮ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು, ಸಂಘದ ಸದಸ್ಯರು ಸೇರಿದಂತೆ ಒಟ್ಟು 16 ಜನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು, ಭಜನಾ ಸಂಕೀರ್ತನೆಯ ಜೊತೆಗೆ ಪಾದಯಾತ್ರೆಯು ಬಹಳ ಯಶಸ್ವಿಯಾಗಿ ಜರುಗಿತು.

ದೇವರ ಆಶೀರ್ವಾದದ ಜೊತೆಗೆ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಚನದ ನುಡಿಗಳು ಪಾದಯಾತ್ರಾರ್ಥಿಗಳಿಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಿತು.