ಸಾಧನಾ ಶ್ರೀ ಪ್ರಶಸ್ತಿ ಪುರಸ್ಕಾರ – ಜೆಸಿ ಗುರುಪ್ರಸಾದ್ ಶೆಟ್ಟಿ ಹಾಲಾಡಿಗೆ ಗೌರವ

0
25

ಜೆಸಿಐ ಮಡಂತ್ಯಾರಿನ ಆತಿಥ್ಯದಲ್ಲಿ ನಡೆದ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ “ಮೃದಿನಿ 2026” ಕಾರ್ಯಕ್ರಮದಲ್ಲಿ ಜೆಸಿಐ ಹಾಲಾಡಿ ವಾರಾಹಿಯ ಹೆಮ್ಮೆಯ ಸದಸ್ಯರಾದ ಜೆಸಿ ಗುರುಪ್ರಸಾದ್ ಶೆಟ್ಟಿಯವರು ಪ್ರತಿಷ್ಠಿತ “ಸಾಧನಾ ಶ್ರೀ ಪ್ರಶಸ್ತಿ” ಸ್ವೀಕರಿಸಿ ಜೆಸಿಐ ಹಾಲಾಡಿ ವಾರಾಹಿ ಘಟಕಕ್ಕೆ ಕೀರ್ತಿ ತಂದಿದ್ದಾರೆ.

ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರಾದ ಜೆಎಫ್ಎಸ್ ಸಂತೋಷ್ ಶೆಟ್ಟಿ ವಲಯ ಅಧ್ಯಕ್ಷರು, ವಲಯ -15 ,ಜೆಸಿಐ ಇಂಡಿಯಾ ಅವರು ಪ್ರಶಸ್ತಿ ಪುರಸ್ಕೃತ ಜೆಸಿ ಗುರುಪ್ರಸಾದ್ ಶೆಟ್ಟಿಯವರನ್ನು ಗೌರವಿಸಿ ಅಭಿನಂದಿಸಿದರು.

ಜೆಸಿ ಗುರುಪ್ರಸಾದ್ ಶೆಟ್ಟಿಯವರು ಸಮಾಜ ಸೇವೆ, ನಾಯಕತ್ವ ಹಾಗೂ ಜೆಸಿಐ ಚಟುವಟಿಕೆಗಳಲ್ಲಿ ನೀಡಿರುವ ವಿಶೇಷ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಈ ಸಾಧನೆಗೆ ಜೆಸಿಐ ಹಾಲಾಡಿ ವಾರಾಹಿ ಘಟಕದ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ, ಶಂಕರನಾರಾಯಣ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಪ್ರವೀಣ್ ಬಾಳೆಕೊಡ್ಲು, ಕಾರ್ಯದರ್ಶಿ ಅಶೋಕ ಆಚಾರಿ ಹಾಗೂ ಉಪಾಧ್ಯಕ್ಷರಾದ ಜೆಸಿ ಜನಾರ್ಧನ ಮೊಗವೀರ ಹಾಲಾಡಿ, ಜೆಸಿ ನಾರಾಯಣ ಮೊಗವೀರ,ಜೆಸಿ ರಾಘವೇಂದ್ರ ಕುದ್ರುಬೆಟ್ಟು, ಜೆಸಿ ಆಶಾ ಕುಲಾಲ್, ಜೆಸಿ ಅವಶ್ಯ ಶೆಟ್ಟಿ, ಜೆಸಿ ಮಂಜುಳ ಶೆಟ್ಟಿ ಹಾಗೂ ಜೆಸಿಐ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.