“ನಮ್ಮ ಶಾಲೆ – ನಮ್ಮ ಜವಾಬ್ದಾರಿ” ಪ್ರೌಢ ಶಾಲೆ ಮೂಡಂಬೈಲ್ ನಲ್ಲಿ ಶ್ರಮದಾನ

0
12

ಮೂಡಂಬೈಲು : “ನಮ್ಮ ಶಾಲೆ – ನಮ್ಮ ಜವಾಬ್ದಾರಿ” ಎಂಬ ಶೀರ್ಷಿಕೆಯೊಂದಿಗೆ ಸರಕಾರಿ ಪ್ರೌಢ ಶಾಲೆ ಮೂಡಂಬೈಲು ಇದರ ಅಭಿವೃದ್ಧಿ ಕಾರ್ಯದ ಮೊದಲ ಹಂತದ ಶ್ರಮದಾನ ಕಾರ್ಯಕ್ರಮ ಅಗಸ್ಟ್ ಇಪ್ಪತ್ತಮೂರು ಭಾನುವಾರ ನಡೆಯಿತು.

ಶಾಲಾ ಶತಮಾನೋತ್ಸವ ಸಮಿತಿ,ಹಳೆ ವಿದ್ಯಾರ್ಥಿ ಸಂಘ,ಶಾಲಾ ಬೆಂಬಲ ಸಮಿತಿ ಹಾಗೂ ಶಾಲಾ ಹಿತೈಷಿ,ರಕ್ಷಕ ಶಿಕ್ಷಕ ಸಂಘ ಹಾಗೂ ಶಾಲಾ ಮಾತೃ ಮಂಡಳಿಯ ಸದಸ್ಯ ಸದಸ್ಯೆಯರು “ನಮ್ಮ ಶಾಲೆ – ನಮ್ಮ ಜವಾಬ್ದಾರಿ” ಎಂಬ ಶೀರ್ಷಿಕೆಯ ಮೊದಲ ಹಂತದ ಅಭಿವೃದ್ಧಿಗೆ ಶ್ರಮದಾನ ಮಾಡುವ ಮುಖಾಂತರ ಸಹಕಾರಿಸಿದ್ದಾರೆ.