ಸುರಕ್ಷಾ ಸಂಗಮ(ರಿ.)ಪುರ್ಲಿಪಾಡಿ ವತಿಯಿಂದ ಗೌಜಿ ಗಮ್ಮತ್ 2026

0
25

ಸಂಸ್ಕಾರಯುಕ್ತ ಜೀವನ ಕಲಿಸಲು ಹಾಗೂ ಗ್ರಾಮ ವ್ಯಾಪ್ತಿಯ ಜನರ ಕಷ್ಟ ಸುಖ ಅರಿಯಲು ಸುರಕ್ಷಾ ಸಂಗಮ (ರಿ.)ಪುರ್ಲಿಪಾಡಿ ಮಾಡುವ ಕಾರ್ಯಕ್ರಮಗಳು ಮಾದರಿಯಾಗಿದೆ. ಸಂದೇಶ್ ಶೆಟ್ಟಿ

ಕಲ್ಲಡ್ಕ : ಸಂಸ್ಕಾರಯುಕ್ತ ಜೀವನ ಕಲಿಸಲು ಹಾಗೂ ಗ್ರಾಮ ವ್ಯಾಪ್ತಿಯ ಜನರ ಕಷ್ಟ ಸುಖ ಅರಿಯಲು ಸುರಕ್ಷಾ ಸಂಗಮ (ರಿ.)ಪುರ್ಲಿಪಾಡಿ ಮಾಡುವ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದು ಬಿ ಜೆ ಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು ಹೇಳಿದರು. ಅವರು ಸುರಕ್ಷಾ ಸಂಗಮ (ರಿ.)ಪುರ್ಲಿಪಾಡಿ, ಕಲ್ಲಡ್ಕ ಆಶ್ರಯದಲ್ಲಿ ಆಗುಸ್ಟ್ 23 ನೇ ರವಿವಾರ ಕಲ್ಲಡ್ಕ ಮರಾಠಿ ಭವನ ಪುರ್ಲಿಪಾಡಿ ಯಲ್ಲಿ ಜರಗಿದ ಗೌಜಿ ಗಮ್ಮತ್- 2026 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಪ್ರಶಾಂತ್ ವಹಿಸಿದ್ದರು. ಈ ಸಂದರ್ಭದಲ್ಲಿ ದೈವ ಚಾಕರಿದಾರ ಯೋಗೀಶ್ ಸುವರ್ಣ, ಗ್ರಾಮ ಗೌರವ ಕೆ ಪಾತ್ರರಾದ ನಾಗರತ್ನ ಪೂರ್ಲಿಪಾಡಿ, 25 ಬಾರಿ ರಕ್ತದಾನ ಮಾಡಿದ ರಾಜೇಶ್ ಬಿ ಆರ್ ನಗರ ರವರನ್ನು ಅಭಿನಂದಿಸಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಬಂಟ್ವಾಳ ತಾಲೂಕು ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಹೊಸ ಕಟ್ಟ ಕನ್ ಸ್ಟಕ್ಷನ್ ಮಾಲಕ ಚಿತ್ರಂಜನ್ ಹೊಸಕಟ್ಟ, ಕೃಷಿಕ ಜಯನಂದ ಏಲ್ತಿ ಮಾರು, ಆರ್ ಕೆ ಡ್ಯಾನ್ಸ್ ಅಕಾಡೆಮಿ ವಿಟ್ಲದ ರಾಜೇಶ್ ವಿಟ್ಲ, ಪ್ರಗತಿಪರ ಕೃಷಿಕ ಜನಾರ್ಧನ ಪೂಜಾರಿ ಗೋಳಿಮಾರ್, ಕೆ ಎಸ್ ಬೇಕರಿ ಮಾಲೀಕ ನವಾಜ್, ಕನ್ನಡ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಆರಾಧ್ಯ ಪ್ರಾಥಿಸಿ, ಸಂಘದ ಗೌರವ ಸಲಹೆಗಾರ ಯತಿನ್ ಕುಮಾರ್ ಏಳ್ತೀಮಾರ್ ಸ್ವಾಗತಿಸಿ, ಸಂಘದ ಗೌರವ ಸಲಹೆಗಾರ ವೆಂಕಟ್ರಾಯ ಪ್ರಭು ಪ್ರಸ್ತಾವಿಕ ನುಡಿಗಳನ್ನಾಡಿ, ಸುರಕ್ಷಾ ಮಹಿಳಾ ಮಂಡಳಿಯ ಅಧ್ಯಕ್ಷ ಉಮಾವತಿ ವಂದಿಸಿದರು.ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.