ಸಾಣೂರಿನಲ್ಲಿ ಬಂಟರ ಒಗ್ಗಟ್ಟಿನ ಹಬ್ಬ – “ಬಂಟೆರೆ ಕೂಡು ಕಟ್ಟ್” ಸಂಪನ್ನ

0
23

ಸಾಣೂರು ಬಂಟರ ಯಾನೆ ನಾಡವರ ಸಂಘದ ವತಿಯಿಂದ *ಬಂಟೆರೆ ಕೂಡು ಕಟ್ಟ್ ಬಂಟೆರೆ ಗೌಜಿ ಗಮ್ಮತ್ ದ ಲೇಸ್ ಮರಿಯಾಲದ ತಿನಸುಲು ಎಂಬ ವಿಶೇಷ ಕಾರ್ಯಕ್ರಮವು 23/08/2026 ರವಿವಾರ ಸಂಜೆ 4 ರಿಂದ 8 ರವರೆಗೆ ಸಾಣೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು .

ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಮಿನಿ ಆಹಾರ ಮೇಳ ಸಂಘದ ಮಹಿಳೆಯರು ಮನೆಯಿಂದ ತಯಾರಿಸಿ ತಂದ ಸುಮಾರು 45 ಬಗೆಯ ವೆಜ್ ಮತ್ತು ನಾನ್ ವೆಜ್ ಸಾಂಪ್ರದಾಯಿಕ ತಿಂಡಿಗಳ ರುಚಿ ಎಲ್ಲರ ಮನ ಗೆದ್ದಿತು. ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಹಲವಾರು ಮೋಜಿನ ಆಟೋಟಗಳನ್ನು ಆಯೋಜಿಸಿ ರಂಜಿಸಲಾಯಿತು.

ಸಮಾರೋಪದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘಮಂಗಳೂರು ಇದರ ಕಾರ್ಕಳ ತಾಲೂಕು ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗ್ಡೆ, ಯುವ ಬಂಟರ ಸಂಘದ ಅಧ್ಯಕ್ಷ ಅವಿನಾಶ್ ಶೆಟ್ಟಿ, ಸಂಘದ ಮಾರ್ಗದರ್ಶಕರಾದ ಮುದೆಲಾಡಿ ಮನೆ ರಮೇಶ್ ಶೆಟ್ಟಿ, ಸಾಣೂರು ಗುತ್ತು ಪ್ರಭಾತ್ ನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಬಹುಮಾನ ವಿತರಿಸಿ ಈ ಕಾರ್ಯಕ್ರಮ ಬಂಟ ಬಂಧುಗಳ ಒಗ್ಗಟ್ಟಿನ ಸಂಕೇತ ಖುಷಿಯಾಗಿ ಕುಟುಂಬದ ಎಲ್ಲರೊಂದಿಗೆ ಬೆರೆತು ನೋವು ನಲಿವುಗಳಿಗೆ ಜೊತೆಯಾಗಲು ಮಾದರಿಯಾಗಿದೆ ಎಂದು ಶ್ಲಾಘಿಸಿದರು .

ಸಾಣೂರು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರು ಮಾತನಾಡಿ ಈ ‘ಬಂಟೆರೆ ಕೂಡು ಕಟ್ಟ್’ ಕಾರ್ಯಕ್ರಮ ಆಯೋಜಿಸಲು ಮುಖ್ಯ ಉದ್ದೇಶ ನಮ್ಮ ಊರಿನ ಎಲ್ಲಾ ಬಂಟರು ಒಂದಾಗಿ ಬೆರೆಯಬೇಕು ಪ್ರತಿಯೊಂದು ಬಂಟ ಕುಟುಂಬಗಳ ಪರಿಚಯ ನಮಗಾಗಬೇಕು ಈ ಕರೆಗೆ ಸ್ಪಂದಿಸಿ ಬಂಟ ಸಮಾಜ ನೀಡಿದ ಸಹಕಾರ ನಮ್ಮ ನಿರೀಕ್ಷೆಗೂ ಮೀರಿದ್ದು ಪ್ರತಿಯೊಂದು ಮನೆಯವರು ತೋರಿದ ಪ್ರೀತಿ ಆತ್ಮೀಯತೆಗೆ ನಾನು ಚಿರಋಣಿ ಈ ಒಗ್ಗಟ್ಟು ಹೀಗೆ ಸದಾ ಇರಲಿ ಎಂದರು ಕಾರ್ಯಕ್ರಮದಲ್ಲಿ ಭಾಮಿನಿ ಏರ್ನಡ್ಕ ಗುತ್ತು ವಿಶ್ವನಾಥ್ ಶೆಟ್ಟಿ ಶಂಕರ್ ಶೆಟ್ಟಿ ಕೆಳಗಿನ ಭಾವ, ವಾಸು ಶೆಟ್ಟಿ, ಮಾಲಿನಿ ಎನ್. ರೈ, ಎಸ್. ರೈ, ಸುಧಾಕರ್ ಶೆಟ್ಟಿ, ಸದಾಶಿವ ಶೆಟ್ಟಿ, ಉದಯ ಶೆಟ್ಟಿ,ರಾಮ್ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿಗಳಾದ ಅಜಯ್ ಶೆಟ್ಟಿ, ನವ್ಯ ಶೆಟ್ಟಿ, ಅರ್ಚನಾ ಶೆಟ್ಟಿ ಪಂಚಾಕ್ಷರಿ ಶೆಟ್ಟಿ ಸ್ಪರ್ಧೆಗಳನ್ನು ನಡೆಸಿ ರಂಜಿಸಿದರು ಕಾರ್ಯಕ್ರಮವನ್ನು ಮೋಹನ್ ಶೆಟ್ಟಿ ಸಾಣೂರು ಮತ್ತು ಪ್ರಸಾದ್ ಶೆಟ್ಟಿ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ವಂದನಾರ್ಪಣೆಗೈದರು ಕೊನೆಯಲ್ಲಿ ಒಟ್ಟಾಗಿ ತಿಂಡಿಗಳ ರುಚಿ ಸವಿದು ಸಂಭ್ರಮಿಸಿದರು.